ಮಣಿಪುರದಲ್ಲಿ ಭೂಕಂಪನ: 4.8 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶನಿವಾರ ತಡರಾತ್ರಿ ಮಣಿಪುರದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಮಣಿಪುರದ ಮೊಯಿರಾಂಗ್‌ನ ಪೂರ್ವ-ಆಗ್ನೇಯ ಪ್ರದೇಶದಲ್ಲಿ ಶನಿವಾರ ರಾತ್ರಿ 11:42 ಕ್ಕೆ ಭೂಕಂಪವು ಸಂಭವಿಸಿದ್ದು ಭೂಕಂಪದ ಕೇಂದ್ರವು ಭೂಮಿಯಿಂದ 94 ಕೀಮೀ ಆಳದಲ್ಲಿರುವುದು ಪತ್ತೆಯಾಗಿದೆ.

ಮೋಯಿರಾಂಗ್ ನಿಂದ ಪೂರ್ವ-ಆಗ್ನೇಯ ಭಾಗದಲ್ಲಿ 66 ಕೀಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಟ್ವೀಟ್‌ ಮಾಡಿದೆ.

ಈ ಹಿಂದೆ ಜುಲೈ 5 ರಂದು ಅಸ್ಸಾಂನಲ್ಲಿ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!