Sunday, April 18, 2021

Latest Posts

ಈಶಾನ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನ್ಯೂಜಿಲೆಂಡ್‌ನ ಈಶಾನ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ ಸುಮಾರು 174 ಕಿಲೋಮೀಟರ್  ದೂರದಲ್ಲಿ ಸಮುದ್ರದ 20.8 ಕಿಲೋಮೀಟರ್ ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಗಿಸ್ಬೋರ್ನ್ ನಿವಾಸಿಗಳು ಕೊಂಚ ಅಲುಗಾಡಿದ ಅನುಭವವಾದ ಬಗ್ಗೆ ಹೇಳಿಕೊಂಡಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.3 ದಾಖಲಾಗಿದ್ದು, ದೇಶದ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಸುನಾಮಿ ಅಪಾಯವಿದೆ ಎಂದು ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ.

ಅಮೆರಿಕದ ಸುನಾಮಿ ಮುನ್ಯೂಚನೆ ವ್ಯವಸ್ಥೆಯು 0.3 ರಿಂದ 1 ಮೀಟರ್ (1 ರಿಂದ 3.3 ಅಡಿ) ಅಲೆಗಳು ಏಳಬಹುದು ಎಂದು ಹೇಳಿತ್ತಾದರೂ ನಂತರ ಅಪಾಯವಿಲ್ಲ ಎಂದು ಹೇಳಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss