ಉತ್ತರಾಖಂಡದಲ್ಲಿ ಭೂಕಂಪ: 4.6 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತರಾಖಂಡದ ಪಿತ್ರೋಘರ್‌ ಬಳಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಪಿತ್ರೋಘರ್ ನ 20 ಕಿ.ಮೀ. ಈಶಾನ್ಯದಲ್ಲಿ ಭೂಕಂಪ ಸಂಭವಿಸಿದೆ.

ಈ ಕುರಿತು ಭಾರತೀಯ ಭೂಂಕಂಪ ಮಾಪನ ಕೇಂದ್ರವು “ಭೂಕಂಪವು ರಿಕ್ಟರ್‌ ಮಾಪಕದಲ್ಲಿ 4.6 ರಷ್ಟು ತೀವ್ರತೆಯನ್ನು ದಾಖಲಿಸಿದೆ. ಬೆಳಿಗ್ಗೆ 10.03ರ ಸುಮಯದಲ್ಲಿ ಭೂಕಂಪವು ಸಂಭವಿಸಿದ್ದು ಭೂ ಮೇಲ್ಮೈಯಿಂ ಐದು ಕಿ.ಮಿ. ಆಳದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ. ಇದು ಪಿತ್ರೋಘರ್‌ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ 20 ಕಿ.ಮೀ ವರೆಗೆ ವ್ಯಾಪಿಸಿಕೊಂಡಿತ್ತು” ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!