ಅಫ್ಘಾನಿಸ್ತಾನದಲ್ಲಿ ನಡುಗಿದ ಭೂಮಿ : 4.7 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ಪೂರ್ವಈಶಾನ್ಯಕ್ಕೆ 285 ಕಿಮೀ ದೂರದಲ್ಲಿ ಗುರುವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದೆ.

ಭೂಕಂಪನದ ತೀವ್ರತೆ 4.7 ರಷ್ಟಿದೆ ಮತ್ತು107 ಅಡಿ ಆಳದಲ್ಲಿ ಭೂಕಂಪನವಾಗಿದೆ ಎಂದು ವರದಿಯಾಗಿದೆ. 8 ದಿನಗಳ ಅವಧಿಯಲ್ಲಿ ಸಂಭವಿಸಿದ ಮೂರನೇ ಭೂಕಂಪವಿದಾಗಿದೆ.

ಅಫ್ಘಾನಿಸ್ತಾನದಲ್ಲಿ ನಿನ್ನೆ ಕೂಡ 4.2 ತೀವ್ರತೆ ಭೂಕಂಪವು 1:40ರ ಸುಮಾರಿಗೆ ಸಂಭವಿಸಿತ್ತು. ಭೂಕಂಪವು 136 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ವರದಿಯಾಗಿತ್ತು.

ಮಾರ್ಚ್ 2 ರಂದು 4.1 ತೀವ್ರತೆಯ ಮತ್ತೊಂದು ಭೂಕಂಪವು ಅಫ್ಘಾನಿಸ್ತಾನದ ಫೈಜಾಬಾದ್ ಪ್ರದೇಶದಲ್ಲಿ ಮುಂಜಾನೆ 2:35ರ ಸುಮಾರಿಗೆ ಅಪ್ಪಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!