Wednesday, August 10, 2022

Latest Posts

ಮನೆಗೆ ನೆಂಟರು ಬಂದಾಗ ಅವರಿಗೆ ಈ ಅನ್ನದ ಕಡುಬು ಮಾಡಿ ಕೊಡಿ… ಇಲ್ಲಿದೆ ರೆಸಿಪಿ

ಊಟಕ್ಕೆ ಮಾಡಿರುವ ಅನ್ನ ಕೆಲವೊಮ್ಮೆ ಹೆಚ್ಚಾಗುತ್ತದೆ. ಆಗ ಅದನ್ನು ಹಾಳು ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ಮಿಕ್ಕಿದ ಅನ್ನದಲ್ಲಿ ಚಿತ್ರನ್ನ ಮಾಡಿ ಅದೂ ಬೋರ್ ಆಗಿರುತ್ತದೆ. ಹಾಗಾದರೆ ನೀವು ಸಿಹಿ ಕಡಬು ಮಾಡಿ.. ಎಷ್ಟು ಸಿಂಪಲ್ ರೆಸಿಪಿ…

ಬೇಕಾಗುವ ಸಾಮಗ್ರಿ:

ಅನ್ನ
ಬೆಲ್ಲ
ಏಲಕ್ಕಿ ಪುಡಿ
ಕಾಯಿತುರಿ
ತುಪ್ಪ

ಮಾಡುವ ವಿಧಾನ:
ಮೊದಲಿಗೆ ಅನ್ನಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ.
ನಂತರ ಅದಕ್ಕೆ ಒಂದು ಕಪ್ ಕಾಯಿತುರಿ, ಏಲಕ್ಕಿ ಪುಡಿ ಹಾಕಿ. ಉಂಡೆ ಕಟ್ಟುವ ಹದಕ್ಕೆ ಬರುವವರೆಗೂ ಚೆನ್ನಾಗಿ ಕುದಿಸಿ. ನಂತರ ಅದನ್ನು ಚಿಕ್ಕ -ಚಿಕ್ಕ ರೊಟ್ಟಿ ರೀತಿ ಕೈಯಲ್ಲಿ ತಟ್ಟಿ ದೋಸೆ ಬಂಡಿ ಮೇಲೆ ತುಪ್ಪ ಹಾಕಿ ಬೇಯಿಸಿದರೆ ಕಡಬು ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss