ಬಾಂಬೆ ಹಲ್ವಾ ಎಂದ ತಕ್ಷಣ ಶಬರಿ ಮಲೆ ಅಣ್ಣಪ್ಪ ಸ್ವಾಮಿ ಪ್ರಸಾದ ನೆನಪಾಗಬಹುದು ಅಲ್ವಾ. ತುಂಬಾ ಸಲಿ ಈ ಹಲ್ವಾ ಹೇಗೆ ಮಾಡೋದು ಅಂಥ ಯೋಚಿಸಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಹೇಗೆ ಮಾಡುವುದು ಅಂಥ.
ಬೇಕಾಗುವ ಸಾಮಗ್ರಿ:
ಅರ್ಧ ಕಪ್ ಕಾರ್ನ್ ಫ್ಲೋರ್
ಒಂದೂವರೆ ಕಪ್ ನೀರು
ಕಾಲು ಕಪ್ ಸಕ್ಕರೆ
1 ಚಮಚ ನಿಂಬೆ ರಸ
4-5 ಚಮಚ ತುಪ್ಪ,
10 ಹೆಚ್ಚಿದ ಗೋಡಂಬಿ
ಕಾಲು ಚಮಚ ಏಲಕ್ಕಿ ಪುಡಿ
ಆರೇಂಜ್ ಫುಡ್ ಕಲರ್
ಮಾಡುವ ವಿಧಾನ:
- ಒಂದು ಪಾತ್ರೆಗೆ ಕಾರ್ನ್ ಫ್ಲೋರ್ ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
- ನಂತರ ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಕಾರ್ನ್ ಫ್ಲೋರ್ ಮಿಶ್ರಣ ಹಾಕಿ ಕುದಿಸಿ.
- ಅದು ಗಟ್ಟಿಯಾಗಲು ಆರಂಭವಾಗುತ್ತಿದ್ದಂತೆಯೇ ನಿಂಬೆರಸ ಬೆರೆಸಿ.
- ಮಿಶ್ರಣ ಸಂಪೂರ್ಣ ಗಟ್ಟಿಯಾಗುವವರೆಗೆ ತಿರುವುತ್ತಿರಿ. ನಂತರ ಒಂದು ಚಮಚದಷ್ಟು ತುಪ್ಪ ಹಾಕಿ.
- ನಂತರ ಫುಡ್ ಕಲರ್, ಏಲಕ್ಕಿ ಪುಡಿ ಹಾಗೂ ಹೆಚ್ಚಿದ ಗೋಡಂಬಿ ಬೆರೆಸಿ ಅದನ್ನು ಬಟ್ಟಲಿಗೆ ಹಾಕಿಕೊಳ್ಳಿ.
- ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡಲೆ ಬಾಂಬೆ ಹಲ್ವಾ ರೆಡಿ.