Wednesday, July 6, 2022

Latest Posts

ಆಲೂಗಡ್ಡೆ ಪಲ್ಯ ಹೀಗೂ ಮಾಡಬಹುದು… ಈಸಿ ರೆಸಿಪಿ

ಯಾವಾಗಲು ಆಲೂಗಡ್ಡೆಯಿಂದ ಒಂದೇ ರೀತಿ ಪಲ್ಯಾ ಮಾಡ್ತೀರಾ? ಇನ್ಮುಂದೆ ಈ ರೀತಿಯಾಗಿ ಟ್ರೈ ಮಾಡಿ.. ಈಸಿ ರೆಸಿಪಿ..

ಬೇಕಾಗುವ ಸಾಮಗ್ರಿ:

ಆಲೂಗಡ್ಡೆ
ಅರಿಶಿಣ
ಸಾಸಿವೆ
ಇಂಗು
ಉಪ್ಪು
ಹುಣಸೆಹಣ್ಣು
ಕರಿಬೇವು
ಕಾಯಿ ತುರಿ
ಖಾರದ ಪುಡಿ

ಮಾಡುವ ವಿಧಾನ:

  • ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಎರಡು ಚಮಚ ಹಾಕಿ.
  • ಅದಕ್ಕೆ ಸಾಸಿವೆ, ಕರಿಬೇವು, ಇಂಗು ಅರಿಶಿನ ಪುಡಿ, ಖಾರದ ಪುಡಿ ಹಾಕಿ..
  • ನಂತರ ಸಣ್ಣಗೆ ಹೆಚ್ಚಿದ ಆಲೂಗಡ್ಡೆ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ.
  • ನಂತರ ಹುಣಸೆಹಣ್ಣಿನ ರಸ ಎರಡು ಚಮಚ, ಬೆಲ್ಲ ನಿಂಬೆ ಗಾತ್ರದಷ್ಟು ಹಾಕಿ ಚೆನ್ನಾಗಿ ಮುಚ್ಚಿಡಿ.
  • ನಂತರ ಕಾಯಿತುರಿ ಮೂರು ಚಮಚ ನೀರು ಹಾಕದೆ ಒಂದು ಸುತ್ತು ರುಬ್ಬಿಕೊಂಡು ನಂತರ ಪಲ್ಯದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆಲೂಗಡ್ಡೆ ಪಲ್ಯ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss