ಉತ್ತರ ಕನ್ನಡದ ಶಿರಸಿ, ಯಲ್ಲಾಪುರ ಕಡೆಯ ಹವ್ಯಕ ಮನೆಗಳಲ್ಲಿ ಪ್ರತಿ ದಿನ ಬೆಳಗಿನ ಖಾಯಂ ತಿಂಡಿಯೇ ತೆಳ್ಳೇವು. ಇಲ್ಲಿ ಬೆಳಗ್ಗೆ ತೆಳ್ಳೇವು ಬಿಟ್ಟು ಬೇರೆ ತಿಂಡಿ ಇಲ್ಲವೇ ಇಲ್ಲ.. ಈ ಈಸಿ ರೆಸಿಪಿ ಮಾಡೋದು ಹೇಗೆ ನೋಡಿ..
ಬೇಕಾಗುವ ಸಾಮಗ್ರಿ:
ಅಕ್ಕಿ
ಸೌತೆಕಾಯಿ
ಉಪ್ಪು
ಉದ್ದಿನ ಬೇಳೆ
ಮೆಂತೆಕಾಳು
ಮಾಡುವ ವಿಧಾನ:
- ಮೊದಲಿಗೆ ಅರ್ಧ ಕೆಜಿಯಷ್ಟು ಅಕ್ಕಿ, ಮುಕ್ಕಾಲು ಚಮಚ ಮೆಂತೆ ಕಾಳು, ಎರಡು ಚಮಚ ಉದ್ದಿನ ಬೇಳೆಯನ್ನು 5 ಗಂಟೆ ನೀರಿನಲ್ಲಿ ನೆನೆಸಿಡಿ.
- ಅಕ್ಕಿ ಸರಿಯಾಗಿ ನೆನೆದ ಮೇಲೆ ಅದನ್ನು ತೊಳೆದು ಸಣ್ಣಗೆ ಹೆಚ್ಚಿಕೊಂಡ ಒಂದು ಸೌತೆಕಾಯಿಯೊಂದಿಗೆ ರುಬ್ಬಿಕೊಳ್ಳಿ.
- ರುಬ್ಬಿಕೊಂಡ ಹಿಟ್ಟನ್ನು 3 ಗಂಟೆ ಹಾಗೇ ಬಿಡಿ.
- ನಂತರ ಈ ತೆಳುವ ಹಿಟ್ಟನ್ನು ದೋಸೆ ಹೆಂಚಿನ ಮೇಲೆ ಹಾಕಿ, ಮಡಿಚಿದ ಬಾಳೆಲೆ ಸೀಳಿನಿಂದ ಸರಸರನೇ ವೃತ್ತಾಕಾರವಾಗಿ ಎರೆದರೆ ತೆಳ್ಳೇವು ರೆಡಿ.