Monday, August 8, 2022

Latest Posts

ಬಾಯಲ್ಲಿ ನೀರೂರಿಸುವ ಅಪರೂಪದ ‘ಕಳಲೆ’ ಪಲ್ಯ: ಎಷ್ಟು ಈಸಿ ಗೊತ್ತಾ ಈ ರೆಸಿಪಿ ಮಾಡುವುದು?

ಮಳೆಗಾಲದಲ್ಲಿ ಬಿದಿರಿನ ಹಿಂಡಿನ ಮಧ್ಯೆ ಬೆಳೆಯುವ ಎಳೆ ಬಿದಿರು ಅಂದರೆ ಕಳಲೆಗೆ ಎಲ್ಲಿದ ಡಿಮ್ಯಾಂಡ್. ಈ ಸಮಯದಲ್ಲಿ ಮಲೆನಾಡಿಗರ ಮನೆಯಲ್ಲಿ ಕಳಲೆಯದೇ ಅಡುಗೆ. ಹೆಚ್ಚಾಗಿ ಕಳಲೆಯಿಂದ ಪಲ್ಯಾ, ಸಾಂಬಾರು ಮಾಡುತ್ತಾರೆ. ಈಸಿಯಾಗಿ ಹೇಗೆ ಕಳಲೆ ಪಲ್ಯಾ ಮಾಡುವುದು ನೋಡಿ.

ಬೇಕಾಗುವ ಸಾಮಗ್ರಿ:

ಸಣ್ಣಗೆ ಹೆಚ್ಚಿದ ಕಳಲೆ – 3 ಕಪ್
ಎಣ್ಣೆ – 2 ಚಮಚ
ಸಾಸಿವೆ
ಜೀರಿಗೆ
ಅರಿಶಿಣ
ಉದ್ದಿನಬೇಳೆ
ಕೆಂಪು ಮೆಣಸಿನಕಾಯಿ
ಸಕ್ಕರೆ
ಹಸಿ ಮೆಣಸು

ಮಾಡುವ ವಿಧಾನ :

  •  ಕಳಲೆಯನ್ನು ಚಿಕ್ಕದಾಗಿ ಹೆಚ್ಚಿ ಮೂರು ದಿನ ನೀರಲ್ಲಿ ನೆನೆಸಿಡಿ.
  • ನಂತರ ಕಳಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮೇಲೆ ಹೇಳಿರುವುದನ್ನೆಲ್ಲಾ ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಕಳಲೆ ಸೇರಿಸಿ.
  • ನಂತರ ಬೆಲ್ಲ, ಉಪ್ಪು ಹಾಕಿ ಮುಚ್ಚಿಟ್ಟು ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಕಳಲೆ ಪಲ್ಯ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss