Wednesday, August 10, 2022

Latest Posts

ಕೆಸುವಿನ ಸೊಪ್ಪು ‘ಕರ್ಕ್ಲಿ’ ಮಾಡೋದು ಹೇಗೆ ಗೊತ್ತಾ? ಮಳೆಗಾಲದಲ್ಲಿ ಸಕ್ಕತ್ ಟೇಸ್ಟಿ ಈ ರೆಸಿಪಿ

ಮಲೆನಾಡಿನಲ್ಲಿ ಧೋ ಮಳೆಗಾಲ ಶುರುವಾಗುತ್ತಿದ್ದಂತೆಯೇ ವಾರಕ್ಕೆ ಮೂರು ದಿನವಾದರೂ ಕೆಸುವಿನ ಸೊಪ್ಪು ಕರ್ಕ್ಲಿ ಮಾಡುತ್ತಾರೆ. ಇದು ಅನ್ನದ ಜೊತೆ, ದೋಸೆ ಜೊತೆ ಸೇವಿಸಬಹುದು. ಹೇಗೆ ಮಾಡುವುದು ಎಂದು ಇಲ್ಲಿದೆ ಓದಿ..

ಬೇಕಾಗುವ ಸಾಮಗ್ರಿ:
ಕೆಸುವಿನ ಸೊಪ್ಪು
ಲಿಂಬು,
ಬೆಳ್ಳುಳ್ಳಿ,
ಹಸಿ ಮೆಣಸು.
ಕಾಯಿತುರಿ,
ಸಾಸಿವೆ,
ಎಣ್ಣೆ,
ಇಂಗು,
ಉಪ್ಪು,

ಮಾಡುವ ವಿಧಾನ:

  • ಮೊದಲು ಕೆಸುವಿನ ಸೊಪ್ಪನ್ನು, ಉಪ್ಪು, ಹುಳಿಪುಡಿ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ, ಅದು ಚೆನ್ನಾಗಿ ಮಡ್ಡಿ ರೀತಿಯಲ್ಲಿ ಬೆಂದಿರಬೇಕು.
  • ನಂತರ ಎರಡು ಚಮಚದಷ್ಟು ಕಾಯಿತುರಿ, ಎಣ್ಣೆಯಲ್ಲಿ ಹುರಿದುಕೊಂಡ ಹಸಿ ಮೆಣಸು (ಖಾರ) ಹೆಚ್ಚಿರಬೇಕು. 10 ಎಸಳು ಬೆಳ್ಳುಳ್ಳಿ. ಇವಷ್ಟನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
  • ಇವಿಷ್ಟನ್ನೂ ಬೇಯಿಸಿ ಇಟ್ಟುಕೊಂಡ ಕೆಸುವಿನ ಸೊಪ್ಪಿಗೆ ಹಾಕಬೇಕು. ನಂತರ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು.
  • ಅದು ಬಿಸಿ ಆದ ಮೇಲೆ ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಮತ್ತೊಂದು ಸ್ವಲ್ಪ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಬೇಕು.
  • ನಂತರ ಕರ್ಕ್ಲಿ ತಣ್ಣಗಾದ ಮೇಲೆ ಲಿಂಬು ರಸ ಹಾಕಬೇಕು, ಉಪ್ಪು ರುಚಿಗೆ ತಕ್ಕಷ್ಟು ಹಾಕಿದರೆ ಕರ್ಕ್ಲಿ ರೆಡಿ. ಇದನ್ನು ದೋಸೆ ಜೊತೆ, ಅನ್ನದ ಜೊತೆ ಕೂಡ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss