ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಸಿ ಅನ್ನದ ಜೊತೆ ಸಕ್ಕತ್ ಟೇಸ್ಟಿ ಈ ಹೀರೆಕಾಯಿ ಪಲ್ಯ.. ಹೇಗೆ ಮಾಡೋದು ನೋಡಿ..

ಚಪಾತಿ,ರೊಟ್ಟಿ, ದೋಸೆ, ಅನ್ನ ಎಲ್ಲದಕ್ಕೂ ಬರುತ್ತೆ ಈ ಹೀರೆಕಾಯಿ ಪಲ್ಯ. ಬಹಳ ಈಸಿಯಾಗಿ ಹೇಗೆ  ಮಾಡುವುದು ಇಲ್ಲಿದೆ ನೋಡಿ.  ಈ ಪಲ್ಯ ಹೀರೆಕಾಯಿ ಇಷ್ಟವಿಲ್ಲದವರೂ ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿ:

ಹೀರೆಕಾಯಿ 2
ಈರುಳ್ಳಿ 1
ಟೊಮ್ಯಾಟೊ 1
ಹಸಿಮೆಣಸು 2
ಶುಂಠಿ 1 ಇಂಚು
ಬೆಳ್ಳುಳ್ಳಿ 4 ಎಸಳು
ಉಪ್ಪು ರುಚಿಗೆ
ಎಣ್ಣೆ
ಅರಶಿಣ
ಚಿಲ್ಲಿ ಪೌಡರ್
ಧನಿಯಾ ಪೌಡರ್
ಗರಂ ಮಸಾಲೆ
ಜೀರಿಗೆ
ಓಂ ಕಾಳು

ಮಾಡುವ ವಿಧಾನ:

  • ಹೀರೆಕಾಯಿಯನ್ನು ಗಾಲಿ ಆಕಾರದಲ್ಲಿ ಕಟ್ ಮಾಡಿ ಇಡಿ.
  • ಈರುಳ್ಳಿ ,ಟೊಮ್ಯಾಟೊ ಉದ್ದಕ್ಕೆ ಹಚ್ಚಿಡಿ. 2 ಹಸಿಮೆಣಸು ಸೀಳಿ ಇಡಿ. ಶುಂಠಿ, ಬೆಳ್ಳುಳ್ಳಿ ಹಚ್ಚಿಡಿ
  • ಸ್ಟವ್ ಆನ್ ಮಾಡಿ, ಪಾತ್ರೆ ಇಟ್ಟು ಅದಕ್ಕೆ 4 ಸ್ಪೂನ್ ಎಣ್ಣೆ ಹಾಕಿ, ಕಟ್ ಮಾಡಿದ ಹೀರೆಕಾಯಿ ಅದರಲ್ಲಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಒಂದು ಪ್ಲೇಟ್ ನಲ್ಲಿ ಅದನ್ನು ತೆಗೆಡಿದಿ.
  • ಅದೇ ಪಾತ್ರೆಗೆ 1 ಚಮಚ ಓಂಕಾಳು,1 ಚಮಚ ಜೀರಿಗೆ ಹಾಕಿ ನಂತರ ಕಟ್ ಮಾಡಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿದುಕೊಳ್ಳಿ.
  • ಅದಲ್ಲೆ ಸ್ವಲ್ಪ ಉಪ್ಪು, ಟೊಮ್ಯಾಟೊ ಹಾಕಿ ಬೇಯಿಸಿ
  • ನಂತರ ಫ್ರೈ ಮಾಡಿದ ಹೀರೆಕಾಯಿ ಹಾಕಿ ಅದಕ್ಕೆ ಚಿಲ್ಲಿ ಪೌಡರ್ 1 ಚಮಚ , ಅರಿಶಿಣ, ಧನಿಯಾ ಪುಡಿ, 1 ಚಮಚ ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ.
  • ಕೊನೆಗೆ ಹಸಿಮೆಣಸು ,ಶುಂಠಿ ಹಾಕಿ ಮಿಕ್ಸ್ ಮಾಡಿ 2 ನಿಮಿಷದ ನಂತರ ಸ್ಟವ್ ಆಫ್ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss