ಹೆಚ್ಚಾಗಿ ಎಲ್ಲರೂ ಸಕ್ಕರೆಯಿಂದ ಪಂಚಕಜ್ಜಾಯ ಮಾಡುತ್ತಾರೆ. ಬೆಲ್ಲದಿಂದ ಮಾಡುವುದು ಕಡಿಮೆ. ಆದರೆ ಆರೋಗ್ಯದ ದೃಷ್ಟಿಯಿಂದ ಬೆಲ್ಲದ ಪಂಚಕಜ್ಜಾಯ ಒಳ್ಳೆಯದು. ಮಾಡುವುದು ಕೂಡ ಈಸಿ. ಹೇಗೆ ಮಾಡುವುದು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿ:
ಕಡ್ಲೆಬೇಳೆ-ಅರ್ಧ ಕಪ್,
ಬೆಲ್ಲ ( ಜೋನಿ ಬೆಲ್ಲ) ಅರ್ಧ ಕಪ್ತು,
ಪ್ಪ-3 ಚಮಚ,
ಕೊಬ್ಬರಿ-ಅರ್ಧ ಕಪ್,
ಮಾಡುವ ವಿಧಾನ:
- ಕಡ್ಲೆಬೇಳೆಯನ್ನು ಮಂದ ಉರಿಯಲ್ಲಿ ಕೆಂಪಗೆ ಹುರಿದು ಪುಡಿ ಮಾಡಿಕೊಳ್ಳಿ
- ನಂತರ ಬೆಲ್ಲವನ್ನು ಕಾಯಿಸಿ ಪಾಕ ಬರಿಸಿಕೊಳ್ಳಿ.
- ಪಾಕಕ್ಕೆ ಹುರಿದು ಪುಡಿ ಮಾಡಿಕೊಂಡ ಕಡಲೆ ಬೇಳೆ, ತುಪ್ಪದಲ್ಲಿ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
- ನಂತರ ಒಂದು ಕಾಟನ್ ಬಟ್ಟೆಯಲ್ಲಿ ಇದನ್ನು ಹಾಕಿ ತಿಕ್ಕಿರಿ. ಪಂಚಕಜ್ಜಾಯ ಉದುರುದಿರಾಗುತ್ತದೆ.