Thursday, August 11, 2022

Latest Posts

 ಅಕ್ಕಿ, ಕಡಲೆ ಬೇಳೆ ಪಾಯಸ: ಮಕ್ಕಳಿಗೂ ಇಷ್ಟವಾಗು ರೆಸಿಪಿ ಇದು…

ಇನ್ನೇನು ಕೆಲವೇ ದಿನಗಳಲ್ಲಿ ಚೌತಿ ಹಬ್ಬ ಬರುತ್ತಿದೆ. ಗಣೇಶನಿಗೆ ಪಾಯಸ ಅಂದ್ರೆ ತುಂಬಾನೆ ಇಷ್ಟ. ನಿಮ್ಮ ಹಬ್ಬದ ಅಡುಗೆ ಲಿಸ್ಟ್ನಲ್ಲಿ ಅಕ್ಕಿ ಪಾಯಸ ಕೂಡ ಇರಲಿ.

ಬೇಕಾಗುವ ಸಾಮಗ್ರಿ:
ಅಕ್ಕಿ
ಕಡಲೆ ಬೇಳೆ
ಸಕ್ಕರೆ ( ಬೆಲ್ಲ)
ಹಾಲು
ಏಲಕ್ಕಿ
ಡ್ರೈ ಫ್ರುಟ್ಸ್
ತುಪ್ಪ

ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
  • ತೊಳೆದುಕೊಂಡ ಅಕ್ಕಿ ಮತ್ತು  ಸ್ವಲ್ಪ ಕಡಲೆ ಬೇಳೆಯನ್ನು ಹಾಲಿನಲ್ಲಿ ಮೃದುವಾಗಿ ಬೇಯಿಸಿಕೊಳ್ಳಿ.
  • ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಸಕ್ಕರೆ (ಬೆಲ್ಲ), ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದುಕೊಂಡ ಡ್ರೈ ಫ್ರುಟ್ಸ್, 3 ಚಮಚ ತುಪ್ಪ, ಮತ್ತೆ ಒಂದು ಕಪ್ ಹಾಲು ಹಾಕಿ ಚೆನ್ನಾಗಿ ಕುದಿಸಿ. ಹೀಗೆ ಮಾಡಿದರೆ ಪಾಯಸ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss