Saturday, August 13, 2022

Latest Posts

ತುಂಬಾ ಟೇಸ್ಟಿಯಾಗಿ ಮಾಡಬಹುದು ಎಳ್ಳು ಉಂಡೆ: ಗಣೇಶ ಚತುರ್ಥಿ ದಿನ ಈ ರೆಸಿಪಿ ತಪ್ಪದೇ ಮಾಡಿ..

ಉಂಡೆ ಎಂದ್ರೆ ಮಕ್ಕಳಿಗೂ ಇಷ್ಟ ದೊಡ್ಡವರಿಗೂ ಇಷ್ಟ. ಅದರಲ್ಲೂ ಈ ಆರೋಗ್ಯಕರ ಎಳ್ಳುಂಡೆಯಂತೂ ತಿನ್ನುವುದಕ್ಕೂ ರುಚಿ ಮಾಡುವುದಕ್ಕೂ ಈಸಿ. ಗಣೇಶ ಚತುರ್ಥಿ ದಿನ ೋ ರೆಸಿಪಿ ತಪ್ಪದೇ ಮಾಡಿ..

ಬೇಕಾಗುವ ಸಾಮಗ್ರಿ:

ಬಿಳಿ ಎಳ್ಳು
ಬೆಲ್ಲ
ಏಲಕ್ಕಿ ಪುಡಿ
ಕೊಬ್ಬರಿ ತುರಿ

ಮಾಡುವ ವಿಧಾನ:

  • ಮೊದಲಿಗೆ ಎಳ್ಳನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
  • ಆನಂತರ ಬೆಲ್ಲವನ್ನು ಪಾಕಕ್ಕಿಡಿ.
  • ಉಂಡೆ ಕಟ್ಟುವ ಹದಕ್ಕೆ ಬೆಲ್ಲ ಪಾಕ ಬಂದಮೇಲೆ ಅದಕ್ಕೆ ಹುರಿದುಕೊಂಡ ಎಳ್ಳು, ಕೊಬ್ಬರಿ ತುರಿ ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss