ಹೊದ್ಲು ( ಭತ್ರದ ಅರಳು) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಇದನ್ನು ಹಾಗೇ ಇನ್ನುವುದಕ್ಕೆ ಆಗೋದಿಲ್ಲ. ಇದನ್ನು ಉಂಡೆ ಮಾಡಿಕೊಂಡು ತಿನ್ನಬಹುದು. ಸಾಮಾನ್ಯವಾಗಿ ಚೌತಿ ಹಬ್ಬದ ದಿನ ಈ ಉಂಡೆ ಮಾಡುತ್ತಾರೆ. ನೀವು ಕೂಡ ಇದನ್ನು ಟ್ರೈ ಮಾಡಿ.
ಬೇಕಾಗುವ ಸಾಮಗ್ರಿ:
ಹೊದ್ಲು
ಬೆಲ್ಲ
ಏಲಕ್ಕಿ ಪುಡಿ
ಕೊಬ್ಬರಿ ತುರಿ
ಮಾಡುವ ವಿಧಾನ:
- ಮೊದಲಿಗೆ ಹೊದ್ಲನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
- ಆನಂತರ ಅದನ್ನು ಮಿಕ್ಸಿಯಲ್ಲಿ ಕಡಿ ಕಡಿಯಾಗಿ ರುಬ್ಬಿಕೊಳ್ಳಿ
- ಆನಂತರ ಬೆಲ್ಲವನ್ನು ಪಾಕಕ್ಕಿಡಿ.
- ಉಂಡೆ ಕಟ್ಟುವ ಹದಕ್ಕೆ ಬೆಲ್ಲ ಪಾಕ ಬಂದಮೇಲೆ ಅದಕ್ಕೆ ರುಬ್ಬಿಕೊಂಡ ಹೊದ್ಲು ಮತ್ತು ಕೊಬ್ಬರಿ ತುರಿ ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ. ಹೀಗೆ ಮಾಡಿದರೆ ಹೊದ್ಲು ಉಂಡೆ ರೆಡಿ.