ಯಾವಾಗಲೂ ಒಂದೇ ರೀತಿ ಪಲ್ಯ ಮಾಡುವ ಬದಲು ಬೇರೆ ಬೇರೆ ಪಲ್ಯ ಮಾಡಿ. ಹೀರೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ತಿನ್ನುವುದಕ್ಕೂ ರುಚಿ. ಈ ಪಲ್ಯವನ್ನು ಚಪಾತಿ, ದೋಸೆ, ಅನ್ನದ ಜೊತೆ ತಿನ್ನಬಹುದು.. ಇಲ್ಲಿದೆ ಈಸಿ ರೆಸಿಪಿ..
ಬೇಕಾಗುವ ಸಾಮಗ್ರಿ:
ಹೀರೆಕಾಯಿ
ಅರಿಶಿಣ
ಸಾಸಿವೆ
ಇಂಗು
ಉಪ್ಪು
ಹುಣಸೆಹಣ್ಣು
ಕರಿಬೇವು
ಇಂಗು
ಕಾಯಿ ತುರಿ
ಮಾಡುವ ವಿಧಾನ:
- ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಎರಡು ಚಮಚ ಹಾಕಿ.
- ಅದಕ್ಕೆ ಸಾಸಿವೆ ಕರಿಬೇವು ಇಂಗು ಅರಿಶಿನ ಪುಡಿ ಹಾಕಿ..
- ನಂತರ ಸಣ್ಣಗೆ ಹೆಚ್ಚಿದ ಹೀರೆಕಾಯಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
- ಹುಣಸೆಹಣ್ಣಿನ ರಸ ಎರಡು ಚಮಚ, ಬೆಲ್ಲ ನಿಂಬೆ ಗಾತ್ರದಷ್ಟು ಹಾಕಿ ಚೆನ್ನಾಗಿ ಮುಚ್ಚಿಡಿ. ಬೇಕಿದ್ದರೆ ನೀರು ಹಾಕಿ.
- ನಂತರ ಕಾಯಿತುರಿ ಮೂರು ಚಮಚ, ಹಸಿಮೆಣಸು ಮೂರು ಹಾಕಿ ಮಿಕ್ಸಿಯಲ್ಲಿ ನೀರು ಹಾಕದೆ
- ಒಂದು ಸುತ್ತು ರುಬ್ಬಿಕೊಂಡು ನಂತರ ಪಲ್ಯದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿದರೆ ಹೀರೆಕಾಯಿ ಪಲ್ಯ ರೆಡಿ.