ಲಿಂಬೆ ಹಣ್ಣುನ್ನು ಎಲ್ಲ ಅಡುಗೆಗಳಲ್ಲೂ ಬಳಸುತ್ತಾರೆ. ಆದರೆ ಲಿಂಬೆ ಹಣ್ಣಿನಿಂದಲೇ ಮಾಡುವ ಅಡುಗೆ ಎಂದರೆ ಅದು ಅಪ್ಪೆಹುಳಿ ಮಾತ್ರ. ಮಲೆನಾಡಿಗರ ಇಷ್ಟದ ರೆಸಿಪಿಗಳಲ್ಲಿ ಒಂದು. ಈ ಲಿಂಬೆ ಹಳ್ಳಿನ ಅಪ್ಪೆಹುಳಿಯನ್ನು ಹೊಸರೀತಿಯಲ್ಲಿ ಮಾಡಬಹುದು ಹೇಗೆ ನೋಡಿ..
ಬೇಕಾಗುವ ಸಾಮಗ್ರಿ:
ಲಿಂಬೆಹಣ್ಣು
ಕಾಯಿ ತುರಿ
ಉಪ್ಪು
ಸಕ್ಕರೆ
ಜೀರಿಗೆ
ಬೆಳ್ಳುಳ್ಳಿ
ಒಗ್ಗರಣೆಗೆ ಬೇಕಾಗುವ ಸಾಮಗ್ರಿ:
ಕರಿ ಬೇವಿನ ಸೊಪ್ಪು
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಹಸಿಮೆಣಸು
ಒಣಮೆಣಸು
ಇಂಗು
ಮಾಡುವ ವಿಧಾನ:
- ಮೊದಲಿಗೆ ಲಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ರಸ ತೆಗೆದುಕೊಳ್ಳಿ. ನಂತರ ಅದಕ್ಕೆ 2 ಕಪ್ ನೀರನನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಆನಂತರ ಎರಡು ಟೇಬಲ್ ಸ್ಪೂನ್ ನಷ್ಟು ಕಾಯಿ ತುರಿ, ಅರ್ಧ ಸ್ಪೂನ್ ಜೀರಿಗೆ, 5 ಎಸಳು ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಲಿಂಬು ಮಿಶ್ರಿತ ನೀರಿಗೆ ಹಾಕಿರಿ.
- ಆನಂತರ ಎಣ್ಣೆ, ಒಣಮೆಣಸು, ಹಸಿಮೆಣಸು, ಕೆರಿಬೇವಿನ ಸೊಪ್ಪು, ಇಂಗು ಉದ್ದಿನಬೇಳೆ, ಸಾಸಿವೆ ಹಾಕಿ ಒಗ್ಗರಣೆ ಹಾಕಿದರೆ ಲಿಂಬುಹಣ್ಣಿನ ಅಪ್ಪೆಹುಳಿ ರೆಡಿ. ಈ ಅಪ್ಪೆಹುಳಿ ಮೆತ್ತಗಿನ ಬಿಸಿ ಅನ್ನದ ಜೊತೆ ಬಹಳ ರುಚಿಯಾಗುತ್ತದೆ.