ನುಗ್ಗಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಸೊಪ್ಪನ್ನು ನೇರವಾಗಿ ತಿನ್ನಲು ಆಗದಿದ್ದರೆ ಅಡುಗೆಯಲ್ಲಿ ಬಳಸಿ ತಿನ್ನಬಹುದು. ಇನ್ಮುಂದೆ ಚಿತ್ರನ್ನದ ಸ್ಟೈ ಲ್ ನಲ್ಲಿಯೇ ಮಾಡಿ ನುಗ್ಗಿ ಸೊಪ್ಪಿನ ಈ ಬಾತ್. ಹೇಗೆ ಮಾಡುವುದು ನೋಡಿ..
ಬೇಕಾಗುವ ಪದಾರ್ಥ:
ಅನ್ನ
ನುಗ್ಗಿ ಸೊಪ್ಪು
ಎಣ್ಣೆ
ಈರುಳ್ಳಿ
ಹಸಿ ಮೆಣಸು
ಕೊತ್ತಂಬರಿ ಸೊಪ್ಪು
ಸಾಸಿವೆ
ಬೆಳ್ಳುಳ್ಳಿ
ಉದ್ದಿನ ಬೇಳೆ
ಉಪ್ಪು
ಲಿಂಬು
ಸಕ್ಕರೆ
ಮಾಡುವ ವಿಧಾನ:
- ಮೊದಲಿಗೆ ಅನ್ನವನ್ನು ಮಾಡಿಕೊಳ್ಳಿ.
- ಆನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸನ್ನೂ ಹೆಚ್ಚಿಕೊಳ್ಳಿ.
- ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಅಮೇಲೆ ಸಾಸಿವೆ, ಉದ್ದಿನ ಬೇಳೆ, ಹೆಚ್ಚಿಕೊಂಡ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಎರಡು ಮುಷ್ಟಿಯಷ್ಟು ನುಗ್ಗಿ ಸೊಪ್ಪು ಹಾಕಿ ಫ್ರೈ ಮಾಡಿಕೊಳ್ಳಿ.
- ಆನಂತರ ಅದಕ್ಕೆ ಸಕ್ಕರೆ, ಉಪ್ಪು, ಲಿಂಬು ಹಾಕಿ ಮಿಕ್ಸ್ ಮಾಡಿ. ಆ ಮಿಕ್ಸ್ ಗೆ ಅನ್ನವನ್ನು ಹಾಕಿ ಕಲಸಿದರೆ ನುಗ್ಗಿ ಸೊಪ್ಪಿನ ಬಾತ್ ರೆಡಿ.