ಗೆಣಸಿನ ಗೊಜ್ಜು ತುಂಬಾ ಜನ ಕೇಳಿರುವುದೇ ಇಲ್ಲ. ಇದು ತುಂಬಾ ಸಿಂಪಲ್ ಆಗಿ ಬೇಗ ಮಾಡುವ ರೆಸಿಪಿ. ಇದನ್ನು ದೋಸೆ, ಚಪಾತಿ, ರೊಟ್ಟಿ, ಅನ್ನದ ಜೊತೆ ಸೇವಿಸಬಹುದು. ಹೀಗೆ ಮಾಡಿ..
ಬೇಕಾಗುವ ಪದಾರ್ಥ:
ಗೆಣಸು
ಒಳಮೆಣಸು
ಹುಳಸೇ ಹಣ್ಣು
ಬೆಳ್ಳುಳ್ಳಿ
ಬೆಲ್ಲ
ಉಪ್ಪು
ಎಣ್ಣೆ
ಕರಿಬೇವು
ಸಾಸಿವೆ
ಮಾಡುವ ವಿಧಾನ:
- ಮೊದಲು ಗೆಣಸನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು.
- ನಂತರ ಒಣಮೆಣಸು, ಬೆಳ್ಳುಳ್ಳಿ, ನೆನೆಸಿಟ್ಟ ಹುಣಸೆ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
- ನಂತರ ಗೆಣಸಿನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಪೀಸ್ ಮಾಡಿಕೊಳ್ಳಬೇಕು.
- ಆಮೇಲೆ ಬಾಣಲೆಗೆ ಎಣ್ಣೆ ಹಾಕಿಕೊಂಡು ಕರಿ ಬೇವು ಮತ್ತು ಸಾಸಿವೆ, ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಕುದಿ ಬರಿಸಿದ ಮೇಲೆ ಗೆಣಸನ್ನು ಹಾಕಿ, ಸ್ವಲ್ಪ ನೀರನ್ನು ಹಾಕಬೇಕು.
- ಆಮೇಲೆ ಉಪ್ಪು ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿದರೆ ಗೆಣಸು ಗೊಜ್ಜು ರೆಡಿ.