ಕೊಸಂಬರಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು . ಯಾವಾಗಲು ಸೌತೆಕಾಯಿ ಕೊಸಂಬರಿ ಮಾಡುವ ಬದಲು ಹೆಸರು ಬೇಳೆ ಕೊಸಂಬರಿ ಮಾಡಿ. ಮಾಡುವುದಕ್ಕೂ ಈಸಿ, ತಿನ್ನುವುದಕ್ಕು ರುಚಿ.
ಬೇಕಾಗುವ ಸಾಮಗ್ರಿ:
ಹೆಸರು ಬೇಳೆ
ಸೌತೆಕಾಯಿ
ದಾಳಿಂಬೆ
ಲಿಂಬು
ಉಪ್ಪು
ಜೋಳ
ಮಾಡುವ ವಿಧಾನ:
- ಮೊದಲಿಗೆ ಹೆಸರು ಬೇಳೆಯನ್ನು 2 ಗಂಟೆ ನೆನೆಸಿಡಿ.
- ನಂತರ ನೆನೆಸಿಟ್ಟ ಹೆಸರು ಬೇಳೆಗೆ ಸೌತೆಕಾಯಿ, ದಾಳಿಂಬೆ ಬೀಜ, ಲಿಂಬು ರಸ, ಉಪ್ಪು, ಸ್ವೀಟ್ ಕಾರ್ನ್ ಹಾಕಿ ಮಿಕ್ಸ್ ಮಾಡಿದರೆ ಕೊಸ0ಬರಿ ರೆಡಿ.