spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ರೀತಿ ಮ್ಯಾಗಿ ಮಾಡೋ ಬದಲು ಈ ಹೊಸ ರೀತಿ ಮ್ಯಾಗಿ ಟ್ರೈ ಮಾಡಿ… ಟೇಸ್ಟಿ ರೆಸಿಪಿ

- Advertisement -Nitte

ಮ್ಯಾಗಿ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಮ್ಯಾಗಿ ಎಂದ್ರೆ ತುಂಬಾ ಇಷ್ಟಾ. ಆದ್ರೆ ಒಂದೇ ರೀತಿ ಮ್ಯಾಗಿ ತಿಂದ್ರೆ ಎಲ್ಲರಿಗೂ ಬೋರ್ ಆಗುತ್ತದೆ. ಈ ಹೊಸ ರೀತಿ ಮ್ಯಾಗಿ ಟ್ರೈ ಮಾಡಿ..

ಬೇಕಾಗುವ ಸಾಮಾಗ್ರಿ…

ಪನ್ನೀರ್
ಈರುಳ್ಳಿ
ಟೊಮ್ಯಾಟೊ
ಕ್ಯಾರೆಟ್
ಅಚ್ಚಖಾರದ ಪುಡಿ
ಅರಿಶಿಣ
ದನಿಯಾ ಪುಡಿ
ಹಸಿರು ಬಟಾಣಿ
ಮ್ಯಾಗಿ

ಮಾಡುವ ವಿಧಾನ:

  • ಒಂದು ಪಾತ್ರೆಯ ಒಂದು ಕಪ್ ನೀರನ್ನು ಹಾಕಿ ಕುದಿಸಿ.
  • ಅದಕ್ಕೆ ಮ್ಯಾಗಿ ಮತ್ತು ಮ್ಯಾಗಿ ಮಸಾಲ ಹಾಕಿ ಚೆನ್ನಾಗಿ ಬೇಯಿಸಿ.
  • ನೀರು ಆರಿದ ನಂತರ ಒಂದೆಡೆ ಇಟ್ಟುಕೊಳ್ಳಿ.
  • ನಂತರ ಒಂದು ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಪನ್ನೀರ್ ಕ್ಯೂಬ್‌ಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದಿಟ್ಟುಕೊಳ್ಳಿ.
  • ನಂತರ ಅದೇ ಪ್ಯಾನ್‌ನಲ್ಲಿ 1-2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮ್ಯಾಟೋ, ಹೆಚ್ಚಿದ ಕ್ಯಾರೆಟ್, ಹಸಿರು ಬಟಾಣಿ ಸೇರಿಸಿ 2 ನಿಮಿಷ ಹುರಿಯಿರಿ.
  • ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿಣ, ದನಿಯಾ ಪುಡಿ, ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 3-4 ನಿಮಿಷ ಚೆನ್ನಾಗಿ ಹುರಿಯಿರಿ.
  • ಹುರಿದ ನಂತರ ಇದನ್ನು ಬೇಯಿಸಿಕೊಂಡ ಮ್ಯಾಗಿಗೆ ಹಾಕಬೇಕು.
  • ನಂತರ ಈ ಮಿಶ್ರಣಕ್ಕೆ ಈಗಾಗಲೇ ಹುರಿದಿಟ್ಟ ಪನ್ನೀರ್ ಅನ್ನು ಸೇರಿಸಿ ಸ್ವಲ್ಪ ನೀರು ಮತ್ತು ಮಾಡಿಟ್ಟು ಕೊಂಡಿರುವ ಮ್ಯಾಗಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪನ್ನೀರ್ ಮಸಾಲಾ ಮ್ಯಾಗಿ ಟೇಸ್ಟ್ ಮಾಡಲು ಸಿದ್ಧ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss