ತುಂಬಾ ಜನ ಹಾಗಲಕಾಯಿ ಕಹಿ ಎಂದು ಅದರ ಹತ್ತುರಕ್ಕೂ ಸುಳಿಯುವುದಿಲ್ಲ. ಆದರೆ ಇದು ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಕೂಡ ಆರೋಗ್ಯಕ್ಕೂ ಒಳ್ಳೆಯದು. ಕಹಿ ಕಡಿಮೆ ಆಗುವಂತೆ ಹೇಗೆ ಹಾಗಲಕಾಯಿ ಪಲ್ಯಾ ಮಾಡುವುದು ಇಲ್ಲಿದೆ ನೋಡಿ..
ಬೇಕಾಗುವ ಸಾಮಾಗ್ರಿಗಳು
ಹಾಗಲಕಾಯಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಖಾರದ ಪುಡಿ
ಬೆಲ್ಲ
ಉಪ್ಪು
ಎಣ್ಣೆ
ಮಾಡುವ ವಿಧಾನ
- ಮೊದಲು ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಎಣ್ಣೆ ಹಾಕಿ ಹುರಿದುಕೊಳ್ಳಿ. ಚೆನ್ನಾಗಿ ಹುರಿದರೆ ಇಲ್ಲೇ ಕಹಿ ಹೋಗಿಬಿಡುತ್ತದೆ.
- ನಂತರ ಎಣ್ಣೆ ಹಾಕಿ ಒಗ್ಗರಣೆ ಹಾಕಿ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ.
- ಸ್ವಲ್ಪ ಬೆಂದ ನಂತರ ಟೊಮ್ಯಾಟೊ ಹಾಕಿ ಹಾಗಲಾಕಾಯಿ ಹಾಕಿ.
- ನಂತರ ಈ ಮಿಶ್ರಣಕ್ಕೆ ಉಪ್ಪು,ಬೆಲ್ಲ,ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ಸ್ವಲ್ಪ ಸಮಯ ಹುರಿದರೆ ಹಾಗಲಕಾಯಿ ಪಲ್ಯ ರೆಡಿ.