Saturday, August 13, 2022

Latest Posts

ದೇಹದಲ್ಲಿ ಪಿತ್ತದ ಅಂಶ ಹೆಚ್ಚಾದರೆ ದೊಡ್ಡಪತ್ರೆ ಎಲೆಯ ಚಟ್ನಿ ಸೇವಿಸಿ: ಟೇಸ್ಟಿ ರೆಸಿಪಿ

ದೊಡ್ಡ ಪತ್ರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಿತ್ತ ಪ್ರಕೃತಿಯವರು ನಿತ್ಯ ಇದನ್ನು ಸೇವಿಸಿದರೆ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ. ಈ ಎಲೆಯನ್ನು ಹಾಗೇ ಸೇವಿಸುವುದು ಕಷ್ಟ. ಹಾಗಾಗಿ ಇದರ ಚಟ್ನಿ ಮಾಡಿಕೊಂಡು ಸೇವಿಸಿ. ಈ ಚಟ್ನಿ ದೋಸೆಗೂ ಸೈ, ಅನಕ್ಕೂ ಜೈ.. ಚಟ್ನಿ ಹೇಗೆ ಮಾಡುವುದು ಇಲ್ಲಿದೆ ನೋಡಿ…

ಬೇಕಾಗುವ ಸಾಮಗ್ರಿ:

ದೊಡ್ಡೊತ್ರೆ ಎಲೆ
ಕಾಯಿ ತುರಿ
ಎಳ್ಳು
ಉಪ್ಪು
ಎಣ್ಣೆ
ಹುಣಸೆ ಹಣ್ಣು
ಹಸಿ ಮೆಣಸು
ಸಾಸಿವೆ
ಇಂಗು
ಈರುಳ್ಳಿ
ಲಿಂಬು

ಮಾಡುವ ವಿಧಾನ:

  • ಮೊದಲಿಗೆ ಎಣ್ಣೆಯಲ್ಲಿ ದೊಡ್ಡ ಪತ್ರೆ ಸೊಪ್ಪು, ಹಸಿಮೆಣಸು, ಎಳ್ಳು, ಕಾಳುಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ.
  • ನಂತರ ಹುರಿದುಕೊಂಡಿರುವುದಕ್ಕೆ ಒಂದು ಕಪ್ ಕಾಯಿತುರಿ, ಹುಣಸೆಹಣ್ಣು, ಉಪ್ಪು ಹಾಕಿ ರುಬ್ಬಿಕೊಳ್ಳಿ.
  • ನಂತರ ಅದಕ್ಕೆ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ.
  • ನಂತರ ಲಿಂಬು ರಸ ಮತ್ತು ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಮಿಕ್ಸ್ ಮಾಡಿದರೆ ದೊಡ್ಡ ಪತ್ರೆ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss