ನಾನ್ವೆಜ್ ಅಡುಗೆ ಮಾಡುತ್ತಿದ್ದೀರಾ? ಅದರಲ್ಲೂ ಚಪಾತಿಗೆ ಯಾವುದಾದರೂ ಗ್ರೇವಿ ಮಾಡುತ್ತೀರಾ ಎಂದಾದರೆ ನಾವು ಹೇಳಿಕೊಡುವ ರೆಸಿಪಿ ನಿಮ್ಮ ಸಹಾಯಕ್ಕೆ ಬರುತ್ತದೆ. ಈಸಿಯಾಗಿ ಈ ರೆಸಿಪಿಯನ್ನು ಮಾಡಬಹುದು. ಬ್ಯಾಚುಲರ್ಸ್ ಕೂಡ ಈ ರೆಸಿಪಿ ಟ್ರೈ ಮಾಡಬಹುದು ಚಿಕನ್ ಗ್ರೀನ್ ಫ್ರೈ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..
ಬೇಕಾಗಿರುವ ಸಾಮಾಗ್ರಿಗಳು
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ
- ಪುದೀನಾ
- ಹಸಿಮೆಣಸು
- ಟೊಮ್ಯಾಟೊ
- ಕಾಳುಮೆಣಸು
- ಕೊತ್ತಂಬರಿ
- ಚಕ್ಕೆ
- ಲವಂಗ
- ಚಿಕನ್
ಮಾಡುವ ವಿಧಾನ - ಮೊದಲು ಎಣ್ಣೆ ಹಾಗೂ ಹಸಿಮೆಣಸು ಹಾಕಿ ಚಿಕನ್ ಹಾಕಿ ಬೇಯಿಸಿ.
- ಇತ್ತ ಮಿಕ್ಸಿಗೆ ಈರುಳ್ಳಿ,ಬೆಳ್ಳುಳ್ಳಿ,ಟೊಮ್ಯಾಟೊ,ಹಸಿಮೆಣಸು,ಶುಂಠಿ ಬೆಳ್ಳುಳ್ಳಿ, ಚಕ್ಕೆ ಲವಂಗ,ಪುದೀನ,ಕೊತ್ತಂಬರಿ ಹಾಕಿ ರುಬ್ಬಿ.
- ನಂತರ ಈ ಮಿಶ್ರಣವನ್ನು ಚಿಕನ್ ಚೆನ್ನಾಗಿ ಬೆಂದ ನಂತರ ಹಾಕಿ ಮಿಕ್ಸ್ ಮಾಡಿ.
- ನಂತರ ಇದಕ್ಕೆ ಉಪ್ಪು, ಖಾರ ಬೇಕೆಂದರೆ ಕಾಳು ಮೆಣಸಿನ ಪುಡಿಯನ್ನು ಹಾಕುತ್ತಾ ಬನ್ನಿ.
- ಚಿಕನ್ ಎಣ್ಣೆ ಬಿಡುವವರೆಗೂ ಬೇಯಿಸಿ, ಮೇಲೆ ಕೊತ್ತಂಬರಿ ಹಾಕಿ ಚಪಾತಿ ಜೊತೆ ಈ ಫ್ರೈ ಸೇವಿಸಬಹುದು.