spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಕ್ಕೊಂದು ಲವಂಗ ಸೇವಿಸಿ… ಇದರಿಂದ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆ ಖಂಡಿತ!

- Advertisement -Nitte

ಲಂವಂಗ ಇಂದು, ನಿನ್ನೆಯಿಂದ ಬಳಕೆಯಲ್ಲಿ ಇರುವಂತದ್ದಲ್ಲ. ಅನಾದಿಕಾಲದಿಂದಲೂ ಬಳಕೆಯಲ್ಲಿ ಇದೆ. ಅಡುಗೆಯಲ್ಲೂ ಇದನ್ನು ಬಳಸುತ್ತಾರೆ, ಔಷಧಿಗಾಗಿಯೂ ಬಳಸುತ್ತಾರೆ. ಮನೆ ಮದ್ದಿನಲ್ಲಿ ಮುಖ್ಯವಾಗಿ ಇದನ್ನು ಬಳಕೆ ಮಾಡುತ್ತಾರೆ. ದಿನವೂ ಒಂದೊಂದು ಲವಂಗ ಸೇವಿಸುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಖಂಡಿತ…

ಬಾಯಿ ವಾಸನೆ:
ಬಾಯಿಯಿಂದ ಬರುವ ಕೆಟ್ಟ ವಾಸನೆ ಲವಂಗ ಸೇನೆಯಿಂದ ನಿವಾರಣೆಯಾಗುತ್ತದೆ.

ಹಲ್ಲುನೋವು:
ಆಗಾಗ ಬರುವ ಹಲ್ಲುನೋವು ಲವಂಗ ಸೇವನೆಯಿಂದ ನಿವಾರಣೆಯಾಗುತ್ತದೆ. ಹಲ್ಲು ಆರೋಗ್ಯವಾಗಿರುತ್ತದೆ.

ಗಂಟಲು ಕೆರೆತ: ಕೆಲವೊಮ್ಮೆ ಗಂಟಲಿನಲ್ಲಿ ತುಂಬಾ ಕೆರತವಿರುತ್ತದೆ. ಅದರಲ್ಲೂ ನೆಗಡಿ ಆಗುವ ಮುನ್ಸೂಚನೆ ‌ಇದ್ದಾಗ ಗಂಟಲು‌ ಕೆರೆತ ಇರುತ್ತದೆ.  ಲವಂಗವನ್ನು ಉಪ್ಪಿನ ಜೊತೆ ಸೇರಿಸಿಕೊಂಡು ಜಗಿದು ರಸ ಕುಡಿದರೆ ಗಂಟಲು ಕೆರೆತ ಕಡಿಮೆ ಆಗುತ್ತದೆ. ಈ ರೀತಿ ನಿತ್ಯ ಮಾಡಬಹುದು.

ಅಜೀರ್ಣ:
ಅಜೀರ್ಣ, ಹೊಟ್ಟೆ ತೊಳೆಸುವುದು ಇಂತಹ ಸಮಸ್ಯೆಗಳು ಲವಂಗ ಸೇವನೆಯಿಂದ ನಿವಾರಣೆಯಾಗುತ್ತದೆ.

ಒತ್ತಡ:
ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ನಿತ್ಯ ಚಹಾ ಮಾಡಿ ಸೇವಿಸಿದರೆ ದೇಹ ಸಮಸ್ಥಿತಿಯಲ್ಲಿ ಇರುತ್ತದೆ.

ಬ್ಯಾಕ್ಟೀರಿಯಾ ನಾಶ:
ಲವಂಗದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಮತ್ತು ಇದು ಸೆಳೆತ, ನಿಶ್ಯಕ್ತಿ ಮತ್ತು ಭೇದಿ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುವುದು. ಲವಂಗದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಇವೆ.

ಮಧುಮೇಹ:
ಲವಂಗದಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಎನ್ನುವ ಅಂಶವು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಯಾಕೆಂದರೆ ನೈಜೀರಿಕಿನ್ ಅಂಶವು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳಲು ಕೋಶಗಳ ಸಾಮರ್ಥ್ಯ ಸುಧಾರಿಸುವುದು ಮತ್ತು ಇನ್ಸುಲಿನ್ ಉತ್ಪತ್ತಿ ಮಾಡಲು ದೇಹಕ್ಕೆ ನೆರವಾಗುವುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss