RECIPE| ಬೆಳ್ಳಂಬೆಳಗ್ಗೆ ಕಿಚಡಿ ತಿನ್ನಿ ಖುಷಿ ಖುಷಿಯಾಗಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ. ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಸಬ್ಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇವತ್ತು ನಾವು ಸಬ್ಬಕ್ಕಿಯಿಂದ ಕಿಟಡಿ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ.

ಬೇಕಾಗುವ ಪದಾರ್ಥಗಳು

ಸಬ್ಬಕ್ಕಿ- 1 ಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು,  1/2 ಟಿ.ಚ.ದಷ್ಟು ಸಾಸಿವೆ, ಜೀರಿಗೆ, ಒಂದು ಗರಿ ಕರಿಬೇವು, ೨ ಚಮಚ ಎಣ್ಣೆ, ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ, 1 ಸಣ್ಣ ಬಟ್ಟಲು ಹುರಿದು ಪುಡಿ ಮಾಡಿದ ಕಡಲೆಕಾಯಿ ಬೀಜ.

ತಯಾರಿಸುವುದು ಹೇಗೆ?

ಹಿಂದಿನ ದಿನ ರಾತ್ರಿಯೇ ಸಬ್ಬಕ್ಕಿಯನ್ನು 3-4 ಬಾರಿ ತೊಳೆದು ಸಬ್ಬಕ್ಕಿ ಮುಳುಗುವಷ್ಟು ನೀರು ಹಾಕಿ ನೆನೆಸಿಟ್ಟುಕೊಳ್ಳಬೇಕು. ಮರುದಿನ ಬೆಳಿಗ್ಗೆ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದನಂತರ ಸಾಸಿವೆ, ಕರಿಬೇವು, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಿ.  ನಂತರ ನೆನೆಸಿಟ್ಟ ಸಬ್ಬಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ಇದಕ್ಕೆ ಉಪ್ಪು, ಕಡಲೆಕಾಯಿ ಬೀಜದ ಪುಡಿ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಸಬ್ಬಕ್ಕಿ ಕಿಚಡಿ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!