ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಣಂತಿಯರು ಎದೆ ಹಾಲು ಹೆಚ್ಚಿಸಲು ಈ ಆಹಾರಗಳನ್ನು ಹೆಚ್ಚು ಸೇವಿಸಿ!

ಎಳೆ ಮಗುವಿಗೆ ತಾಯಿ ಎದೆ ಹಾಲೇ ಸೂಕ್ತ ಆಹಾರ. ಮಗುವಿಗೆ ಕನಿಷ್ಟ ಆರು ತಿಂಗಳವರೆಗಾದರೂ ತಾಯಿ ಎದೆ ಹಾಲನ್ನೇ ಹೊಟ್ಟೆ ತುಂಬುವಷ್ಟು ಕೊಡಬೇಕು.  ತಾಯಿಯಲ್ಲಿ ಮಗುವಿಗೆ ಸಾಕಾಗುವಷ್ಟು ಹಾಲಿಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇನ್ಮುಂದೆ ಚಿಂತಿಸಬೇಡಿ ನೈಸರ್ಗಿಕವಾಗಿ ಎದೆ ಹಾಲನ್ನು ಹೆಚ್ಚಿಸಿಕೊಳ್ಳು ಈ ಆಹಾರಗಳನ್ನು ಹೆಚ್ಚು ಸೇವಿಸಿ.

ಹತ್ತಿ ಕಾಫಿ:
ಹತ್ತಿ (ಕಾಟನ್) ಬೀಜನ್ನು ಬಿಸಿಲಿಗೆ ಒಣಗಿಸಿ ಪುಡಿ ಮಾಡಿಕೊಂಡು, ಒಂದು ಚಮಚ ಹತ್ತಿ ಪುಡಿಯನ್ನು ಒಂದು ಕಪ್ ಹಾಲಿಗೆ ಕುದಿಸಬೇಕು. ಬೇಕಿದ್ದಲ್ಲಿ ಸಕ್ಕರೆ ಹಾಕಿಕೊಳ್ಳಬಹುದು. ಇದನ್ನು ಬಾಣಂತಿಯರು ದಿನವೂ ಕುಡಿದರೆ ಎದೆ ಹಾಲು ಹೆಚ್ಚಾಗುತ್ತದೆ.

ಮೆಂತೆ:
ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು, ನಂತರ ಅದನ್ನು ಅಗೆದು ತಿನ್ನುವುದರಿಂದ ಎದೆ ಹಾಲು ಹೆಚ್ಚುತ್ತದೆ.

ಬಾದಾಮಿ:
ಬಾದಾಮಿಯಲ್ಲಿ ವಿಟಮಿನ್ ಅಂಶ ಹೆಚ್ಚಿರುತ್ತದೆ. ಬಾಣಂತಿಯರು ಬಾದಾಮಿಯನ್ನು ಹೆಚ್ಚು ಸೇವಿಸುವುದರಿಂದ ಎದೆ ಹಾಲು ಕೂಡ ಹೆಚ್ಚುತ್ತದೆ.

ಕಿತ್ತಳೆ:
ಕಿತ್ತಳೆಯಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿರುವುದರಿಂದ  ಸ್ತನ ಹಾಲನ್ನು ವೃದ್ಧಿ ಮಾಡುವುದು. ಇದರಲ್ಲಿ ಪೋಷಕಾಂಶಗಳಾಗಿರುವಂತಹ ವಿಟಮಿನ್ ಎ, ಬಿ, ಮೆಗ್ನಿಶೀಯಂ, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಪೋಸ್ಪರಸ್ ಇದೆ.

ಸಬ್ಬಸ್ಕೆ ಸೊಪ್ಪು:
ಸಬ್ಬಸ್ಕೆ ಸೊಪ್ಪು ದೇಹಕ್ಕೆ ಬಹಳ ತಂಪು ಇದನ್ನು ಬಾಣಂತಿಯರು ಹೆಚ್ಚು ಸೇವಿಸಿದರೆ ಎದೆ ಹಾಲು ವೃದ್ಧಿಯಾಗುತ್ತದೆ.

ಮೆಂತೆ ಸೊಪ್ಪು:
ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಅಂಶವಿರುವುದರಿಂದ ಇದು ಬಾಣಂತಿ ಹಾಗೂ ಮಗುವಿಗೆ ಒಳ್ಳೆಯದು. ಇದರಿಂದ ದೇಹ ತಂಪಗಿರುತ್ತದೆ. ಎದೆ ಹಾಲು ವೃದ್ಧಿಯಾಗುತ್ತದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss