Friday, July 1, 2022

Latest Posts

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಿ: ಕೇಂದ್ರ ಸರಕಾರದಿಂದ ಪದಾರ್ಥಗಳ ಪಟ್ಟಿ ಬಿಡುಗಡೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಸೋಂಕಿತ ವ್ಯಕ್ತಿ ಸ್ನಾಯು ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕೆಲ ನೈಸರ್ಗಿಕ ಆಹಾರ ಪದಾರ್ಥಗಳನ್ನ ಪಟ್ಟಿಯನ್ನ ಬಿಡುಗಡೆ ಮಾಡಿದೆ.
mygovindia ಟ್ವಿಟರ್​ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸರ್ಕಾರ, ರುಚಿ ಹಾಗೂ ವಾಸನೆ ಗ್ರಹಿಸುವ ಶಕ್ತಿಯನ್ನ ಕಳೆದುಕೊಳ್ಳುವುದು ಕೊರೋನಾದ ಸಾಮಾನ್ಯ ಲಕ್ಷಣವಾಗಿದೆ. ಸೋಂಕಿನಿಂದಾಗಿ ಆಹಾರವನ್ನ ಸರಿಯಾದ ಪ್ರಮಾಣದಲ್ಲಿ ಸೇವಿಸಲು ಸಾಧ್ಯವಾಗದೇ ಇರೋದ್ರಿಂದ ರೋಗಿಯು ದುರ್ಬಲರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮೃದುವಾದ ಆಹಾರವನ್ನ ಕೆಲವು ಗಂಟೆಗಳ ಅಂತರದಲ್ಲಿ ನಿಯಮಿತವಾಗಿ ಸೇವಿಸೋದು ಉತ್ತಮ ಎಂದು ಹೊಸ ಮಾರ್ಗಸೂಚಿ ಹೇಳಿದೆ.

ಕೋವಿಡ್​ 19 ರೋಗಿಯ ಆಹಾರ ಕ್ರಮ ಈ ರೀತಿ ಇರಲಿ :

  • ದೇಹಕ್ಕೆ ಸಾಕಷ್ಟು ಪೋಷಕಾಂಶ ಹಾಗೂ ಜೀವಸತ್ವದ ಅವಶ್ಯಕತೆ ಇರೋದ್ರಿಂದ ದಿನಕ್ಕೆ 5 ಬಾರಿ ಹಣ್ಣು ಹಾಗೂ ತರಕಾರಿಗಳನ್ನ ಸೇವಿಸುವುದು ಉತ್ತಮ.
  • 70 ಪ್ರತಿಶತ ಕೋಕೊ ಅಂಶವನ್ನು ಹೊಂದಿರುವ ಸಣ್ಣ ಪ್ರಮಾಣದ ಡಾರ್ಕ್​ ಚಾಕೋಲೇಟ್​ ಸೇವನೆಯಿಂದ ಆತಂಕ ದೂರಾಗಲಿದೆ.
  • ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ದಿನಕ್ಕೆ ಒಂದು ಬಾರಿ ಅರಿಶಿಣದ ಹಾಲನ್ನು ಸೇವಿಸಿ.
  • ಸ್ವಲ್ಪ ಸಮಯದ ಅಂತರದಲ್ಲಿ ಮೃದು ಆಹಾರವನ್ನ ಸೇವಿಸುತ್ತಲೇ ಇರಿ. ಈ ಆಹಾರಕ್ಕೆ ಆಮ್​​ಚೂರ್​​ನ್ನು ಹಾಕಿಕೊಂಡು ತಿನ್ನಿ.
  • ರಾಗಿ, ಓಟ್ಸ್​ನಂತಹ ಆಹಾರ ಧಾನ್ಯಗಳನ್ನು ಸೇವಿಸಿ.
  • ಪ್ರೋಟಿನ್​​ ಅಂಶಗಳು ಅಗಾಧ ಪ್ರಮಾಣದಲ್ಲಿರುವ ಚಿಕನ್​, ಮೀನು, ಮೊಟ್ಟೆ, ಪನ್ನೀರ್​, ಸೋಯಾದಂತಹ ಆಹಾರವನ್ನ ಸೇವಿಸಿ.
  • ವಾಲ್ನಟ್​, ಆಲ್ಮೊಂಡ್​, ಆಲಿವ್​ ಎಣ್ಣೆ ಹಾಗೂ ಮಸ್ಟರ್ಡ್​ ಎಣ್ಣೆಯನ್ನು ಸೇವಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss