ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಮಾವಿನ ಹಣ್ಣು ಮಾತ್ರವಲ್ಲ, ಮಾವಿನ ಎಲೆಯನ್ನೂ ಸೇವಿಸಿ.. ಈ ಎಲೆಯಲ್ಲಿ ಏನ್ ಪವರ್ ಇದೆ ಗೊತ್ತಾ?

ಯಾವಾಗಲೂ ಮಾವಿನ ಕಾಯಿ, ಮಾವಿನ ಹಣ್ಣು ತಿಂದಿರುತ್ತೇವೆ. ಮಾವಿನ ಎಲೆ ಎಂದಿಗೂ ತಿಂದಿರುವುದಿಲ್ಲ. ಇನ್ಮುಂದೆ ಮಾವಿನ ಕಾಯಿ, ಹಣ್ಣಿನ ಜೊತೆ ಮಾವಿನ ಎಲೆಯನ್ನೂ ಸೇವಿಸಿ. ಮಾವಿನ ಎಲೆಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರೀತಿಯಾಗಿ ಮಾವಿನ ಎಲೆಯನ್ನು ಬಳಸಿದರೆ ಆರೋಗ್ಯ ವೃದ್ಧಿಯಾಗುತ್ತದೆ.

ಸಕ್ಕರೆ ಕಾಯಿಲೆ:
ಮಾವಿನ ಎಲೆಗಳನ್ನು ಬಿಸಿಲಿಗೆ ಒಣಗಿಸಿ ಪುಡಿ ಮಾಡಿ, ಆ ಪುಡಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬಿಸಿ ನೀರಿಗೆ ಹಾಕಿಕೊಂಡು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.

ಕಿಡ್ನಿ ಸ್ಟೋನ್:
ಮಾವಿನ ಎಲೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದೇ ನೀರನ್ನು ಸೇವಿಸಿ. ಇದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು ನಿಯಂತ್ರಣಕ್ಕೆ ಬರುತ್ತದೆ.

ಗಂಟಲು ಸಮಸ್ಯೆ:
ಮಾವಿನ ಎಲೆಗೆ ತುಪ್ಪ ಹಚ್ಚಿ ಅದನ್ನು ಎಣ್ಣೆ ದೀಪಕ್ಕೆ ಹಿಡಿದು ಸುಟ್ಟು ಅದರ ಹೊಗೆಯನ್ನು ಸೇವನೆ ಮಾಡಿದರೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಆಗುತ್ತದೆ.

ಕಿವಿ ನೋವು:
ಮಾವಿನ ಎಲೆಯ ರಸವನ್ನು ತೆಗೆದು ಅದನ್ನು ಉಗುರು ಬಿಸಿ ಮಾಡಿ ಕಿವಿಗೆ ಹಾಕಿಕೊಂಡರೆ ಕಿವಿ ನೋವು ನಿವಾರಣೆಯಾಗುತ್ತದೆ.

ಹೊಟ್ಟೆ ಸಂಬಂಧಿ ಕಾಯಿಲೆ:
ಬಿಸಿ ಬಿಸಿ ನೀರಿಗೆ ಮಾವಿನ ಎಲೆಯನ್ನು ಹಾಕಿ ಅದನ್ನು ರಾತ್ರಿ ಪೂರ್ತಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಸುಟ್ಟ ಕಲೆ:
ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಗೆ ಕೊಬ್ಬರಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಸುಟ್ಟ ಕಲೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss