ನಾವು ದಪ್ಪ ಯಾಕೆ ಆಗೋದು ಹೇಳಿ? ಸರಿಯಾದ ಆಹಾರ ತಿಂತೀವಿ. ಆದ್ರೂ ದಪ್ಪ ಆದ್ವಿ ಅಂತ ಕೊರಗುತ್ತೀವಿ. ಆದರೆ ಊಟ ತಿಂಡಿ ಮಧ್ಯೆ ಮಧ್ಯೆ ನಾವು ಏನೆಲ್ಲಾ ತಿಂದಿದ್ದೇವೆ ಹೇಳಿ? ಲೆಕ್ಕನೇ ಇಲ್ಲ ಅಲ್ವಾ?
ಊಟ ತಿಂಡಿ ಮಧ್ಯೆ ಬೋರ್ ಆಯ್ತು ಅಂತ ಏನೇನೋ ತಿನ್ಬೇಡಿ.. ಈ ಹೆಲ್ತಿ ಸ್ನಾಕ್ಗಳನ್ನು ತಿನ್ನಿ..
ಸೌತೆಕಾಯಿ,ಕ್ಯಾರೆಟ್,ಟೊಮ್ಯಾಟೊ ಸಲಾಡ್. ಎಲ್ಲ ತರಕಾರಿ ಕಟ್ ಮಾಡಿ ಉಪ್ಪು, ಚಾಟ್ ಪೌಡರ್ ಹಾಕಿ ತಿನ್ನಿ.
ಪಾಪ್ಕಾರ್ನ್ ತಿನ್ನಿ. ಇದರಲ್ಲಿ ಹೆಚ್ಚು ಕ್ಯಾಲೋರಿ ಇಲ್ಲವಾದ್ದರಿಂದ ಹಸಿವಾದರೆ ಅದನ್ನು ತಿನ್ನಬಹುದು.
ಬಾದಾಮಿ,ಚಿಕ್ಕ ಚಾಕಲೇಟ್ ಪೀಸ್ ಹಾಗೂ ಸ್ವಲ್ಪ ಹಾಲು, ಬೆಲ್ಲ ಹಾಕಿ ಮಿಲ್ಕ್ಶೇಕ್ ಮಾಡಿ ಕುಡಿಯಿರಿ.
ನಿಂಬು ಜ್ಯೂಸ್ ವಿತ್ ಪುದೀನಾ, ಏನಾದರೂ ಕುಡಿಯೋಣ ಎನಿಸಿದರೆ ಪುದೀನಾ, ಉಪ್ಪು ನಿಂಬು ಸ್ವಲ್ಪ ಸಕ್ಕರೆ ಹಾಕಿ ಜ್ಯೂಸ್ ಕುಡಿಯಿರಿ.
ಸೂಪ್ಸ್ ಮನೆಯಲ್ಲಿಯೇ ಮಾಡಿದ ಅಥವಾ ಹೊರಗಿನಿಂದ ತಂದ ಸೂಪ್ಗಳನ್ನು ಕುಡಿಯಿರಿ. ಇದು ನಿಮ್ಮ ತೂಕ ಹೆಚ್ಚಿಸೋದಿಲ್ಲ.
ಮಸಾಲಾ ಓಟ್ಸ್ ಪ್ಯಾಕೆಟ್ಗಳು ಮನೆಯಲ್ಲಿ ಇರಲಿ. ಇದು ನಿಮ್ಮ ಸೇವರ್. ಒಳ್ಳೆಯ ಮಸಾಲಾ ಓಟ್ಸ್ ನಿಮ್ಮ ರುಚಿಗೆ ತಕ್ಕಂತೆ ಮಾಡಿ ತಿನ್ನಿ