ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ಯಾರೆಟ್ ಜ್ಯೂಸ್ ಹೇಗೆ ಮಾಡುವುದು? ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸಿದರೆ ಆರೋಗ್ಯದಲ್ಲಿ ಬದಲಾವಣೆ ಖಂಡಿತ!

ನಮ್ಮ ದೇಹಕ್ಕೆ ಹಣ್ಣು ತರಕಾರಿ ಬಹಳ ಮುಖ್ಯ. ಅದರಲ್ಲೂ ಅಧಿಕ ಪ್ರಮಾಣದಲ್ಲಿ ವಿಟಮಿನ್, ಪ್ರೋಟಿನ್, ಕಾರ್ಬೋಹೈಡ್ರೇಟ್ ಇರುವ ಕ್ಯಾರೆಟ್ ಮತ್ತುಷ್ಟು ಉಪಯೋಗಕಾರಿ. ಕೆಲವರಿಗೆ ಹಾಗೇ ಬೆಳಗ್ಗೆ ಕ್ಯಾರೆಟ್ ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಜ್ಯೂಸ್ ಮಾಡಿಕೊಂಡು ಸೇವಿಸಿ. ಇದರಿಂದ ಏನು ಲಾಭವಿದೆ ನೋಡಿ..

ಜ್ಯೂಸ್ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ:

ಕ್ಯಾರೆಟ್
ನೀರು
ಸಕ್ಕರೆ

ಮಾಡುವ ವಿಧಾನ:

  • ಕ್ಯಾರೆಟ್ ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
  • ಅದಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ಸೋಸಿಕೊಳ್ಳಿ.
  • ಬೇಕಿದ್ದಲ್ಲಿ ಸಕ್ಕರೆ ಹಾಕಿಕೊಳ್ಳಿ. ಹಾಗೇ ಕುಡಿದರೆ ಉತ್ತಮ.

ಇದರಿಂದ ಏನು ಲಾಭ?

  • ಕ್ಯಾರೆಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ನಂತಹ ಮಾರಿಯ ವಿರುದ್ಧ ಹೋರಾಡಲಿದೆ.
  •  ಕ್ಯಾರೆಟ್ ನಲ್ಲಿರುವ ವಿಟಮಿನ್ ಎ ಮಕ್ಕಳ ಕಣ್ಣಿನ ದೃಷ್ಟಿ  ದೋಷ ನಿವಾರಿಸುತ್ತದೆ.
  • ಕ್ಯಾರೆಟ್ ನಲ್ಲಿರುವ ನಾರಿನಾಂಶವು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗೂ ಆಹಾರದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.
  • ಕ್ಯಾರೆಟ್ ನಲ್ಲಿರುವ ಕಾರ್ಬೋಹೈಡ್ರೇಟ್ ನಿಂದ ನಮ್ಮ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡಲಿದೆ.
  • ಕ್ಯಾರೆಟ್ ನಲ್ಲಿರುವ ನಾರಿನಾಂಶದಿಂದ ಮಲಬದ್ದತೆ ಕಡಿಮೆಗೊಳಿಸಿ, ರಕ್ತ ಸಂಚಾರ ಹಾಗೂ ಆಹಾರ ಚಲನೆ ಸುಲಭವಾಗುತ್ತದೆ.
  • ಕ್ಯಾರೆಟ್ ನಲ್ಲಿರುವ ವಿಟಮಿನ್ ಎ ನಿಂದ ನಮಗೆ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗಲು ಸಹಾಯ ಮಾಡುತ್ತದೆ.
  •  ನಮ್ಮ ಮೂಳೆಗಳಿಗೆ ಬಲ ನೀಡುವ ಮಿನೆರಲ್ಸ್ ಗಳನ್ನು ಹೊಂದಿರುವ ಕ್ಯಾರೆಟ್ ನಮ್ಮ ಮೂಳೆಗಳಿಗೆ ಅತಿ ಮುಖ್ಯವಾಗಿರುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss