ಕೈಯಲ್ಲಿ ಆಹಾರ ಸೇವನೆಯಿಂದಾಗುವ ಪ್ರಯೋಜನಗಳೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಯುಸಿ ಲೈಫ್ ನಲ್ಲಿ ಯಾಂತ್ರಿಕ ಬದುಕಿನ ಅಭ್ಯಾಸಕ್ಕೆ ಬಿದ್ದು ಎಲ್ಲರೂ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೈಯಲ್ಲೇ ಊಟ ಮಾಡುತ್ತಿದ್ದ ಕಾಲ ಬದಲಾಗಿ ಚಮಚ, ಫೋರ್ಕ್‌, ಚಾಪ್‌ಸ್ಟಿಕ್‌ ಹೀಗೆ ಅನೇಕ ವಸ್ತುಗಳನ್ನು ಬಳಸಲಾಗುತ್ತದೆ. ಕೈಯಲ್ಲಿ ಆಹಾರ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ತಜ್ಞರು ಸಲಹೆ ಕೂಡಾ ನೀಡುತ್ತಾರೆ.

ನಾವು ನಮ್ಮ ಕೈಗಳಿಂದ ಆಹಾರ ತಿನ್ನುವಾಗ ಕೆಲವು ಮಿಲಿಯನ್ ನರಗಳು ನಮ್ಮ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತವೆ. ಕೈ ಆಹಾರವನ್ನು ಮುಟ್ಟಿದಾಗ, ಸಂವೇದನಾ ನರಗಳ ಮೂಲಕ ಸಂಕೇತಗಳು ಮೆದುಳು ಮತ್ತು ಹೊಟ್ಟೆಯನ್ನು ತಲುಪುತ್ತವೆ. ಈ ಕಾರಣದಿಂದಾಗಿ, ಜೀರ್ಣಕಾರಿ ರಸಗಳು ಮತ್ತು ಕಿಣ್ವಗಳು ಬಿಡುಗಡೆಯಾಗುತ್ತವೆ ಮತ್ತು ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ. ಚಮಚದೊಂದಿಗೆ ಅತಿಯಾಗಿ ಮತ್ತು ವೇಗವಾಗಿ ತಿನ್ನುವುದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಇದು ಮಧುಮೇಹಕ್ಕೆ ಕಾರಣವಾಗುತ್ತದೆ.

ಕೈಯಿಂದ ಆಹಾರ ತಿನ್ನುವುದು ಆರೋಗ್ಯಕರ ಮಾತ್ರವಲ್ಲ, ಯಾವುದೇ ಆಲೋಚನೆಗಳಿಲ್ಲದೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಬೆರಳುಗಳು ತುಟಿಗಳನ್ನು ಸ್ಪರ್ಶಿಸಿದ ತಕ್ಷಣ ಬಾಯಿಯಲ್ಲಿ ನೀರೂರುತ್ತದೆ ಅದರ ರುಚಿ ಸ್ಪರ್ಶ ವೇಗವಾಗಿ ಗೊತ್ತಾಗುತ್ತದೆ.  ಕೈಗಳಿಂದ ತಿನ್ನುವುದು ಸಹ ವ್ಯಾಯಾಮದ ಒಂದು ರೂಪ. ಆದರೆ ಊಟಕ್ಕೆ ಮುಂಚೆ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದನ್ನು ಮರೆಯಬಾರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!