ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪರಿಸರ ಪೂರಕ ಇ-ತ್ಯಾಜ್ಯ ಸಂಗ್ರಹ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಭಾರತದ ಪ್ರಮುಖ K12 ಶಾಲಾ ಸರಣಿಯಾದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆ ಬೆಂಗಳೂರಿನಲ್ಲಿ ಇ-ತ್ಯಾಜ್ಯ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ. ಎಲೆಕ್ಟ್ರಾನಿಕ್‌ ಹಾಗೂ ಎಲೆಕ್ಟ್ರಿಕಲ್‌ ಮರುಬಳಕೆ ಸಂಸ್ಥೆಯಾದ ಇ-ಪರಿಸರದ ಸಹಯೋಗದಲ್ಲಿ ನಡೆದ ಈ ಅಭಿಯಾನದಲ್ಲಿ, ಬೆಂಗಳೂರಿನಲ್ಲಿರುವ ಎಲ್ಲಾ ಆರ್ಕಿಡ್ಸ್‌ ಶಾಖೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.  ಇ-ತ್ಯಾಜ್ಯ ಉತ್ಪನ್ನಗಳ ವಿಂಗಡಣೆ ಹಾಗೂ ಮರುಬಳಕೆಯ ಮಹತ್ವದ ಬಗ್ಗೆ ಇ ಪರಿಸರದ ಪ್ರತಿನಿಧಿ ಪೂರ್ಣಿಮಾ ಮಕ್ಕಳಿಗೆ ಅರಿವು ಮೂಡಿಸಿದರು.

ಹಳೆಯ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ ಗಳು, ಮೌಸ್, ಸ್ಪೀಕರ್, ಬ್ಯಾಟರಿಗಳು, ಪವರ್ ಬ್ಯಾಂಕ್ ಗಳು, ಚಾರ್ಜರ್, ಕುಕ್ಕರ್ ಗಳು, ಗ್ರೈಂಡರ್, ಟಿವಿ, ಹೆಡ್ ಫೋನ್, ಸಿಡಿ ಹಾಗೂ ಹಳೆಯ ಮೊಬೈಲ್ ಫೋನ್ ಗಳು ಸೇರಿದಂತೆ ಮುಂಬೈ, ಪುಣೆ, ಹೈದರಾಬಾದ್‌ ಹಾಗೂ ಬೆಂಗಳೂರು ನಗರಗಳಲ್ಲಿ ಒಟ್ಟು  500 ಕೆಜಿ ಇ-ತ್ಯಾಜ್ಯ ವನ್ನು ಸಂಗ್ರಹಿಸಲಾಗಿದೆ.

ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯ ಸಾರ್ವಜನಿಕ ಸಂವಹನ ಮುಖ್ಯಸ್ಥೆ ಸರ್ವಮಂಗಳಾ ಮಾತನಾಡಿ, “ಇಂದು ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಿದ್ದು,  ಈ ವಸ್ತುಗಳು ಹಳೆಯದಾದರೆ ಅಥವಾ ಕೆಲಸ ಮಾಡದಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ವಿಧಾನ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಪರಿಸರದ ಮೇಲೆ ಈ ಎಲೆಕ್ಟ್ರಾನಿಕ್ ತ್ಯಾಜ್ಯಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!