spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರ್ಥಿಕವಾಗಿ ಹಿಂದುಳಿದವರಿಗೆ ಸೌಲಭ್ಯ ಸಿಗಬೇಕು: ಸಚಿವ ಶಿವರಾಮ ಹೆಬ್ಬಾರ

- Advertisement -Nitte

ದಿಗಂತ ವರದಿ ಅಂಕೋಲಾ:

ಕನ್ನಡ ವೈಶ್ಯ ಸಮಾಜದ ಜನರು ಸರಳತೆ ಮತ್ತು ಸಜ್ಜನಿಕೆಯಿಂದ ಗುರುತಿಸಿಕೊಂಡಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಸಿಗಬೇಕಾದ ಅವಶ್ಯಕ ಸೌಲಭ್ಯಗಳು ಅವರಿಗೆ ಸಿಗುವಂತೆ ಪ್ರಯತ್ನ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಪಟ್ಟಣದ ಕಾಕರಮಠದಲ್ಲಿ ಕನ್ನಡ ವೈಶ್ಯ ಸಮಾಜ ಮತ್ತು ವಿಠ್ಠಲ ಸದಾಶಿವ ದೇವಸ್ಥಾನದ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವೈಶ್ಯ ಸಮಾಜದ ಜನ ದೇಶದ ವಿವಿಧ ಭಾಗಗಳಲ್ಲಿ ನೆಲೆ ನಿಂತರೂ ಅವರ ಜನ್ಮ ಭೂಮಿ ಮತ್ತು ಕರ್ಮ ಭೂಮಿ ಅಂಕೋಲೆಯಾಗಿದ್ದು ವೈಶ್ಯ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸರಕಾರ ಸವಲತ್ತುಗಳನ್ನು ದೊರಕಿಸಿಕೊಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಮಹಾಲಸಾ ನಾರಾಯಣಿ ದೇವಾಲಯ ಮಂಡಳಿಯ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರು ಮಾತನಾಡಿ ಕೇಂದ್ರ ಸರ್ಕಾರದಿಂದ ವಿವಿಧ ಸಮಾಜಗಳ ಬಡವರಿಗೆ ಸಿಗಬೇಕಾದ ವಿಶೇಷ ಸೌಲಭ್ಯ ಕನ್ನಡ ವೈಶ್ಯ ಸಮಾಜದವರಿಗೆ ಸಿಗುವಲ್ಲಿ ತೊಡಕು ಉಂಟಾದಾಗ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಕುರಿತು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದು ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ ಉಸ್ತುವಾರಿ ಸಚಿವರ ಹಾಗೂ ವಿಧಾನಸಭಾದ್ಯಕ್ಷರ ವಿಶೇಷ ಕಾಳಜಿ ಗೆ ಸಮಾಜ ಚಿರಋಣಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಹ ಕನ್ನಡ ವೈಶ್ಯ ಸಮಾಜದ ಶಾರದಾಂಬಾ ಮಹಿಳಾ ಮಂಡಳಿಯ ಸದಸ್ಯೆಯರು ಸನ್ಮಾನಿಸಿದರು.
ಕನ್ನಡ ವೈಶ್ಯ ಸಮಾಜದ ಅಧ್ಯಕ್ಷ ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಕನ್ನಡ ವೈಶ್ಯ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿ, ಪ್ರಮುಖರುಗಳಾದ ಗಣಪತಿ ಶೆಟ್ಟಿ (ಬಾಬು) ವಿನೋದ ಶೆಟ್ಟಿ, ಸುಧಾ ಶೆಟ್ಟಿ ಉಪಸ್ಥಿತರಿದ್ದರು.
ರವೀಂದ್ರ ವೈದ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss