ನವೀಕರಿಸಬಹುದಾದ ಮೂಲಗಳಿಂದ ಭಾರತದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ ಎನ್ನುತ್ತಿದೆ ಆರ್ಥಿಕ ಸಮೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಕಟಿ ಬದ್ಧವಾಗಿದ್ದು ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯುತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ದೇಶದಾಧ್ಯಂತ ಸೌರಶಕ್ತಿ, ಪವನ ಶಕ್ತಿ, ಜಲ ವಿದ್ಯುತ್‌ ಉತ್ಪಾದನೆಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2021 ಹಾಗು 2022ನೇ ಆರ್ಥಿಕ ವರ್ಷದಲ್ಲಿ ನವೀಕರಿಸಬಹುದಾದ ಮೂಲಗಳಿಂದ ದೇಶದಲ್ಲಿನ ವಿದ್ಯುತ್‌ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

“ಭಾರತವು ಪಳೆಯುಳಿಕೆ ರಹಿತ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳ ಕಡೆಗೆ ದೃಢವಾದ ಬದ್ಧತೆ ತೋರಿದೆ. ಭಾರತವು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳಿಂದ ವಿದ್ಯುಚ್ಛಕ್ತಿ ಉತ್ಪಾದಿಸಿ 50 ಪ್ರತಿಶತ ಸಂಚಿತ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹಾಕಿಕೊಂಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಯುಟಿಲಿಟಿಗಳು ಮತ್ತು ಕ್ಯಾಪ್ಟಿವ್ ಪವರ್ ಪ್ಲಾಂಟ್‌(ಉದ್ದಿಮೆಗಳ ಶಕ್ತಿಯುತ್ಪಾದನಾ ಘಟಕ) ಗಳನ್ನು ಒಳಗೊಂಡಂತೆ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವು 482.2 GW ಗಳಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4.7 ಶೇಕಡಾದಷ್ಟು ಏರಿಕೆಯಾಗಿದೆ. 2021 ರಲ್ಲಿ ಇದು 460.7 GW ಗಳಷ್ಟಿತ್ತು.

ದೇಶದ ಒಟ್ಟಾರೆ ಸ್ಥಾಪಿತ ವಿದ್ಯುತ್‌ ಸಾಮರ್ಥ್ಯದಲ್ಲಿ ಉಷ್ಣ ಶಕ್ತಿಯ ಮೂಲಗಳು 59.1 ಪ್ರತಿಶತದಷ್ಟು ಪಾಲು ಹೊಂದಿದ್ದರೆ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳು 27.5 ಪ್ರತಿಶತ ಮತ್ತು ಜಲವಿದ್ಯುತ್ ಸಂಪನ್ಮೂಲಗಳು 11.7 ಪ್ರತಿಶತದಷ್ಟು ಪಾಲು ಹೊಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!