ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮತ್ತೊಬ್ಬ ಟಿಎಂಸಿ ಶಾಸಕ ಅರೆಸ್ಟ್: ಮಮತಾ ಸರ್ಕಾರಕ್ಕೆ ಮತ್ತೊಂದು ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ  ನೇಮಕಾತಿ ಹಗರಣಕ್ಕೆ ಸಂಭಂಧಿಸಿದಂತೆರ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಮುಂಜಾನೆ ಬಂಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಗೆ ಈ ಬಂಧನವು ಮತ್ತೊಂದು ಹಿನ್ನಡೆಯಾಗಿಯಾಗಿ ಪರಿಣಮಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ  ಬಂಧನವಾಗಿತ್ತು. ಇದೀಗ ಪಕ್ಷದ ಮತ್ತೊಬ್ಬ ಪ್ರಮುಖ ನಾಯಕ ಮಾಣಿಕ್ ಬಂಧನ ವಾಗಿದೆ.
ರಾತ್ರಿಯಿಡೀ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಮಾಜಿ ಪ್ರಾಥಮಿಕ ಶಿಕ್ಷಣ ಮಂಡಳಿ ಮುಖ್ಯಸ್ಥರಾದ ಮಾಣಿಕ್‌ ರನ್ನು ಬಳಿಕ ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯದ ಎಸ್‌ಎಸ್‌ಸಿ ನೇಮಕಾತಿ ಹಗರಣದ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಮಾಣಿಕ್ ಮತ್ತು ಪಾರ್ಥ ಚಟರ್ಜಿ ನಡುವೆ ನೇಮಕಾತಿಗೆ ಸಂಬಂಧಿಸಿದಂತೆ ಹಲವಾರು ಚರ್ಚೆಗಳು ನಡೆದಿವೆ ಎಂದು ಚಾರ್ಜ್ ಶೀಟ್ ಹೇಳುತ್ತದೆ.
ಮಾಣಿಕ್ ಅವರನ್ನು ಇಡಿ ಹಲವು ಬಾರಿ ಕರೆಸಿತ್ತು. ಅವರು ಹಲವು ಬಾರಿ ವಿಚಾರನೆಗೆ ಹಾಜರಾಗಿರಲಿಲ್ಲ. ಬಂಧನದ ಭೀತಿಯಿಂದ ಅವರು ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಗಿದ್ದರು. ಆದಾಗ್ಯೂ, ಕೇಂದ್ರೀಯ ತನಿಖಾ ದಳದ ವಿಚಾರಣೆಯಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 2014 ರ ಪ್ರಕಾರ ಶಿಕ್ಷಕರ ನೇಮಕಾತಿಯಲ್ಲಿ ಆಪಾದಿತ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಸುಮಾರು 20 ಲಕ್ಷ ಅಭ್ಯರ್ಥಿಗಳು ಟಿಇಟಿ 2014 ಅನ್ನು ಬರೆದಿದ್ದರು. ಅವರಲ್ಲಿ ಆಯ್ಕೆಯಾದವರನ್ನು 2016 ಮತ್ತು 2020 ರಲ್ಲಿ ಪ್ರಾಥಮಿಕ ಶಿಕ್ಷಕರನ್ನಾಗಿ ನೇಮಿಸಲಾಯಿತು. ಗಮನಿಸಬೇಕಾದ ವಿಚಾರವೆಂದರೆ, ಮಾಣಿಕ್ ಆ ಅವಧಿಯಲ್ಲಿ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದರು.
ಜೂನ್‌ನಲ್ಲಿ, ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಪ್ರಾಯೋಜಿತ ಅಥವಾ ಅನುದಾನಿತ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 269 ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಮಾಣಿಕ್ ಅವರನ್ನು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವಂತೆ ಸೂಚಿಸಿದರು.
ಇಡಿ ಮೂಲಗಳ ಪ್ರಕಾರ ಮಾಣಿಕ್ ಪ್ರಕರಣದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಮಾಣಿಕ್ ಸುಮಾರು 11 ವರ್ಷಗಳಿಂದ ಸುಲಿಗೆ ದಂಧೆ ನಡೆಸುತ್ತಿದ್ದರು ಮತ್ತು ಬಿಎಡ್ ತರಬೇತಿ ಕಾಲೇಜುಗಳಲ್ಲೂ ಸುಲಿಗೆ ನಡೆಯುತ್ತಿತ್ತು ಎಂದು ಮಾಧ್ಯಮ ವರದಿಗಳು ಇಡಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.
ಮಾಣಿಕ್ ದೀರ್ಘಕಾಲದವರೆಗೆ ಏಜೆನ್ಸಿಗಳ ಸ್ಕ್ಯಾನರ್ ಅಡಿಯಲ್ಲಿದ್ದರು. ಏಕೆಂದರೆ ಅವರು ನೇಮಕಾತಿ ಸಮಯದಲ್ಲಿ ಅನೇಕ ಅಕ್ರಮಗಳಲ್ಲಿ ಭಾಗಿಯಾಗಿರುವ ಸುಳಿವು ಸಿಕ್ಕಿತ್ತು. ಪಾರ್ಥ ಚಟರ್ಜಿಯವರೊಂದಿಗೆ ಅವರ ಸಂಪರ್ಕವನ್ನು ಪತ್ತೆಹಚ್ಚಲಾಗಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ.  ಅವರ ವಿರುದ್ಧ ಇಡಿ ಸಂಗ್ರಹಿಸಲಾದ ಪುರಾವೆಗಳು ಸಾಕಷ್ಟು ಅಗಾಧವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!