ಭಾರತದ ಪ್ರಸಿದ್ಧ ಕ್ರಿಪ್ಟೋ ಸಂಸ್ಥೆ ʼಕಾಯಿನ್‌ ಸ್ವಿಚ್‌ʼ ಮೇಲೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ಕ್ರಿಪ್ಟೋ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ನ ಆವರಣದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ ಎಂದು ಮೂಲಗಳು ವರದಿ ಮಾಡಿವೆ. ದೇಶದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಗೆ ಸಂಬಂಧಿಸಿದಂತೆ ಕ್ರಿಪ್ಟೋಕರೆನ್ಸಿ ಸಂಸ್ಥೆಯ ಐದು ಆವರಣಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.

“ನಾವು FEMA (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಇತರ ಘಟಕಗಳ ಅಡಿಯಲ್ಲಿ ಆಗಿರಬಹುದಾದ ಅನೇಕ ಉಲ್ಲಂಘನೆಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. “ನಾವು ಬಯಸಿದ ಸಹಕಾರವನ್ನು ಸ್ವೀಕರಿಸದ ಕಾರಣ ನಿರ್ದೇಶಕರು, ಸಿಇಒ, ಹಾಗೂ ಸಂಸ್ಥೆಯ ಆವರಣದಲ್ಲಿ ದಾಳಿ ನಡೆಸಿಲಾಗಿದೆ” ಎಂದು ಇಡಿ ಹೇಳಿದೆ.

CoinSwitch, $1.9 ಶತಕೋಟಿ ಮೌಲ್ಯದ್ದಾಗಿದ್ದು 18 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಕ್ರಿಪ್ಟೋ ಕಂಪನಿ ಎನ್ನಲಾಗುತ್ತದೆ. ಸಂಸ್ಥೆಯು ಆಂಡ್ರೆಸೆನ್ ಹೊರೊವಿಟ್ಜ್, ಟೈಗರ್ ಗ್ಲೋಬಲ್ ಮತ್ತು ಕಾಯಿನ್‌ಬೇಸ್ ವೆಂಚರ್ಸ್‌ನಿಂದ ಬೆಂಬಲಿತವಾಗಿದೆ.

ಇತ್ತೀಚೆಗೆ ಅಂದರೆ ಆ.4ರಂದು ಭಾರತದ ಅತಿದೊಡ್ಡ ಕ್ರಿಪ್ಟೋ ಎಕ್ಸ್ಚೇಂಜ್ WazirX ನ ಕಾರ್ಯಾಚರಣಾ ಏಜೆನ್ಸಿಯಾದ Zanmai ಲ್ಯಾಬ್ಸ್ನ ಕಚೇರಿಗಳ ಮೇಲೆ ಕೇಂದ್ರೀಯ ಸಂಸ್ಥೆ ದಾಳಿ ಮಾಡಿದ ವಾರಗಳ ನಂತರ ಕಾಯಿನ್‌ ಸ್ವಿಚ್‌ ನ ಮೇಲೆ ಈ ದಾಳಿ ನಡೆದಿದೆ.

ಕೇಂದ್ರ ಏಜೆನ್ಸಿಯು ಆಗಸ್ಟ್ 5 ರಂದು ಜನ್ಮಾಯಿ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರೊಬ್ಬರ ಆವರಣದಲ್ಲಿ ಶೋಧ ನಡೆಸಿತ್ತು ಮತ್ತು ಅವರ ಬ್ಯಾಂಕ್ ಬ್ಯಾಲೆನ್ಸ್  64.67 ಕೋಟಿ ರೂ. ಗಳನ್ನು ತಡೆಹಿಡಿಯಲು ಆದೇಶ ನೀಡಿತ್ತು. ಕ್ರಿಪ್ಟೋ ವಿನಿಮಯದ ವಿರುದ್ಧದ ನಡೆಯಿತ್ತಿರುವ ತನಿಖೆಯು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಚೀನೀ ಸಾಲದ ಅಪ್ಲಿಕೇಶನ್‌ಗಳ (ಮೊಬೈಲ್ ಅಪ್ಲಿಕೇಶನ್‌ಗಳು) ವಿರುದ್ಧ ನಡೆಯುತ್ತಿರುವ ತನಿಖೆಗೆಯೊಂದಿಗೆ ಲಿಂಕ್‌ ಹೊಂದಿದೆ ಎನ್ನಲಾಗಿದೆ.

ಇದಲ್ಲದೇ ದೇಶದ ಇನ್ನೂ 10 ಕ್ರಿಪ್ಟೋ ವಿನಿಮಯಗಳ ಮೇಲೆ ಇಡಿ ಕಣ್ಣಿಟ್ಟಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!