ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಷಾರಾಮಿ ಮದುವೆಯೊಂದಕ್ಕೆ ತೆರಳಿದ್ದ ಬಾಲಿವುಡ್ ನಟ, ನಟಿಯರು ಹಾಗೂ ಗಾಯಕರ ಮನೆ ಮೇಲೆ ಇಡಿ ದಾಳಿ ನಡೆದಿದೆ. ದುಬೈನಲ್ಲಿ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲೀಕೇಷನ್ ಮಾಲೀಕ ಸೌರಭ್ ಚಂದ್ರಕರ್ ಮದುವೆಗೆ ಬಾಲಿವುಡ್ ಸೆಲೆಬ್ಸ್‌ಗಳು ತೆರಳಿ ಪರ್ಫಾರ್ಮ್ ಕೂಡ ಮಾಡಿದ್ದರು.
ಟೈಗರ್ ಶ್ರಾಫ್, ಸನ್ನಿ ಲಿಯೋನಿ, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕೃಷ್ಣ ಅಭಿಷೇಕ್, ಭಾರತಿ, ನೇಹಾ ಕಕ್ಕಡ್, ಆತಿಫ್ ಅಸ್ಲಾಂ, ರಾಹತ್ ಫತೇ ಅಲಿ ಖಾನ್, ಅಲಿ ಅಸ್ಗರ್, ವಿಶಾಲ್ ದದ್ಲಾನಿ ಮೇಲೆ ದಾಳಿ ನಡೆದಿದೆ.
ಸೌರಭ್ ಮದುವೆಯಲ್ಲಿ ಸುಮಾರು 200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ 140 ಕೋಟಿ ರೂಪಾಯಿಯನ್ನು ಹವಾಲಾ ರೂಪದಲ್ಲಿ ಮುಂಬೈನ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೆ ನೀಡಲಾಗಿದೆ. ಕಂಪನಿ ಮೂಲಕ ಬಾಲಿವುಡ್ ಮಂದಿಗೆ ಹಣ ತಲುಪಿಸಲಾಗಿದೆ.
ಮದುವೆಗೆ ತೆರಳಲು ಪ್ರೈವೇಟ್ ಜೆಟ್, ಹೊಟೇಲ್ ರೂಂಗೆ 40 ಕೋಟಿ ರೂಪಾಯಿ ಬಳಸಲಾಗಿದೆ ಎನ್ನುವ ಆರೋಪ ಇದೆ.