ಮಂಗಳೂರಿನಲ್ಲಿ ಉದ್ಯಮಿ ಮನೆಗೆ ಇಡಿ ದಾಳಿ: 17 ಕೋ.ರೂ ಮೌಲ್ಯದ ಆಸ್ತಿ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ಇ.ಡಿ.ದಾಳಿ ನಡೆದಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಹಿನ್ನೆಲೆಯಲ್ಲಿ ಮುಕ್ಕ ಗ್ರೂಪ್ ಆಫ್ ಕಂಪೆನೀಸ್ ನ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ 17.34 ಕೋ.ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್ ಗಳು ಮತ್ತು ಒಂದು ಕೈಗಾರಿಕಾ ನಿವೇಶನವನ್ನು ಇಡಿ ವಶಪಡಿಸಿಕೊಂಡಿದೆ. ಮಾತ್ರವಲ್ಲದೆ ‘ಫೆಮಾ’ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಹ್ಯಾರಿಸ್ ಅವರು ಫೆಮಾ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ, ವ್ಯಾಪಾರ ಘಟಕಗಳನ್ನು ಹೊಂದಿದ್ದಲ್ಲದೆ, ನಿಯಮ ಉಲ್ಲಂಘಿಸಿ ವಿದೇಶೀ ವಿನಿಮಯ ವ್ಯವಹಾರಗಳನ್ನು ಮಾಡಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇಡಿ ದಾಳಿ ನಡೆಸಿತ್ತು.

ತನಿಖೆ ವೇಳೆ ಹ್ಯಾರಿಸ್ ಅವರು ಯುಎಇಯಲ್ಲಿ ಫ್ಲಾಟ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆ ಹೊಂದಿದ್ದು ಅದರ ಒಟ್ಟು ಆಸ್ತಿ ಭಾರತೀಯ ಲೆಕ್ಕಾಚಾರದ ಪ್ರಕಾರ 17.34 ಕೋಟಿ ರು. ಆಗಿದೆ. ಇದು, ಫೆಮಾ ಕಾಯ್ದೆಯ ಸೆ. 4ರ ಅನ್ವಯ ಕಾನೂನು ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾದ ವಿದೇಶದಲ್ಲಿ ಮಾಡಿದ ನಿಯಮ ಉಲ್ಲಂಘನೆಯ ಮೊತ್ತದ ಆಸ್ತಿಯನ್ನು ಭಾರತದೊಳಗೆ ವಶಪಡಿಸಿಕೊಳ್ಳಲು ಇಡಿಗೆ ಅಧಿಕಾರವಿದೆ. ಹಾಗಾಗಿ ಈ ದಾಳಿ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!