ಅಕ್ರಮ ಹಣವರ್ಗಾವಣೆ ಆರೋಪ: ಆಮ್ವೇ ಇಂಡಿಯಾದ 757 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಮ್ವೇ ಇಂಡಿಯಾದ ₹757 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.ತನಿಖಾ ಸಂಸ್ಥೆಯ ಪ್ರಕಾರ, ಸಂಸ್ಥೆಯು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಹಗರಣವನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.

ನೇರ ಮಾರಾಟದ ಬಹು ಹಂತದ ಮಾರುಕಟ್ಟೆ ಜಾಲದ ಸೋಗಿನಲ್ಲಿ ಆಮ್ವೇ ಪಿರಮಿಡ್ ವಂಚನೆ ನಡೆಸುತ್ತಿದೆ ಎಂದು ಇಡಿ ಆರೋಪಿಸಿದ್ದು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಠಿತ ತಯಾರಕರ ಪರ್ಯಾಯ ಜನಪ್ರಿಯ ಉತ್ಪನ್ನಗಳಿಗೆ ಹೋಲಿಸಿದರೆ ಕಂಪನಿಯು ನೀಡುವ ಹೆಚ್ಚಿನ ಉತ್ಪನ್ನಗಳ ಬೆಲೆಗಳು ವಿಪರೀತವಾಗಿವೆ ಎನ್ನಲಾಗಿದೆ.
ಜಪ್ತಿ ಮಾಡಿರುವ ಆಸ್ತಿಗಳಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಆಮ್ವೇಯ ಭೂಮಿ ಮತ್ತು ಕಾರ್ಖಾನೆ ಕಟ್ಟಡ, ಸ್ಥಾವರ ಮತ್ತು ಯಂತ್ರೋಪಕರಣಗಳು, ವಾಹನಗಳು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳು ಸೇರಿವೆ ಎಂದು ಇಡಿ ತಿಳಿಸಿದೆ.

ಈ ಹಿಂದೆ, ಕೇಂದ್ರ ತನಿಖಾ ಸಂಸ್ಥೆಯು ಆಮ್ವೇಗೆ ಸೇರಿದ 36 ವಿವಿಧ ಖಾತೆಗಳಿಂದ ₹411.83 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಮತ್ತು ₹345.94 ಕೋಟಿ ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!