ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆ: 39 ವರ್ಷಗಳ ಆಸ್ತಿ ವಿವರ ಕೇಳಿದ ಇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ 39 ವರ್ಷಗಳಿಂದ ಅವರ ಆಸ್ತಿ ಮತ್ತು ಬ್ಯಾಂಕ್ ವಹಿವಾಟಿನ ವಿವರಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2020 ರಲ್ಲಿ ಅವರ ವಿರುದ್ಧ ದಾಖಲಾಗಿರುವ 74.93 ಕೋಟಿ ರೂಪಾಯಿ ಅಕ್ರಮ ಆಸ್ತಿ (ಡಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಅವರಿಗೆ ಹೊಸ ಸಮನ್ಸ್ ನೀಡಿದ ನಂತರ ಶಿವಕುಮಾರ್ ಇಡಿ ಮುಂದೆ ಹಾಜರಾಗಿದ್ದರು.
ಕೇಂದ್ರೀಯ ತನಿಖಾ ದಳವು ಆರಂಭದಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಈ ಪ್ರಕರಣವನ್ನು ಇಡಿ ವಹಿಸಿಕೊಂಡಿದೆ. ಕರ್ನಾಟಕದ ಬಿಜೆಪಿ ಸರ್ಕಾರವು 2020 ರಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ತನಿಖೆಗೆ ಅನುಮತಿ ನೀಡಿತ್ತು.
ರಾಷ್ಟ್ರ ರಾಜಧಾನಿಯ ಇಡಿ ಪ್ರಧಾನ ಕಚೇರಿಯಲ್ಲಿ ನಡೆದ ಆರು ಗಂಟೆಗಳ ವಿಚಾರಣೆಯ ನಂತರ ಹೊರಬಂದ ಡಿಕೆಶಿ ಮಾಧ್ಯಕಮಗಳಿಗೆ ಪ್ರತಿಕ್ರಿಯೆ ನೀಡಿದರು. “ಕಳೆದ 39 ವರ್ಷಗಳಿಂದ ಆಸ್ತಿ ಖರೀದಿ ಮತ್ತು ಬ್ಯಾಂಕ್ ವಹಿವಾಟು ಸೇರಿದಂತೆ ಆಸ್ತಿ ವಿವರಗಳನ್ನು ನೀಡುವಂತೆ ಇಡಿ ಅಧಿಕಾರಿಗಳು ನನ್ನನ್ನು ಕೇಳಿದ್ದಾರೆ. ಅವರು 1985 ರಲ್ಲಿ ನನ್ನ ಕುಟುಂಬದವರು ಕನಕಪುರ ತಾಲೂಕಿನ ನನ್ನ ಹುಟ್ಟೂರಲ್ಲಿ ಇಂಡಿಯಾ ಟಾಕೀಸ್ ಅನ್ನು ಸ್ಥಾಪಿಸಿದ ಕುರಿತಾಗಿ ವಿವರಗಳನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.
“ನನ್ನ ಚಾರ್ಟರ್ಡ್ ಅಕೌಂಟೆಂಟ್ ಎಲ್ಲಾ ಆಸ್ತಿ ವಿವರಗಳನ್ನು ED ಗೆ ಒದಗಿಸುತ್ತಾರೆ. ಅವುಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದ್ದೇನೆ,” ಎಂದು ಹೇಳಿದರು.“ಯಂಗ್ ಇಂಡಿಯಾ ಟ್ರಸ್ಟ್‌ಗೆ ನನ್ನ ಕೊಡುಗೆಯ ಬಗ್ಗೆ ಇಡಿ ಅಧಿಕಾರಿಗಳು ನನ್ನನ್ನು ಕೇಳಿದರು. ನಾನು ಮತ್ತು ನನ್ನ ಸಹೋದರ ಡಿ.ಕೆ.ಸುರೇಶ್ ಇಬ್ಬರೂ ಚೆಕ್ ಮೂಲಕ ಅದಕ್ಕೆ ಕೊಡುಗೆ ನೀಡಿದ್ದೇವೆ. ಯಂಗ್ ಇಂಡಿಯಾ ಟ್ರಸ್ಟ್ ಸದಸ್ಯರ ವಿವರಗಳ ಬಗ್ಗೆ ಅವರು ನನ್ನನ್ನು ಕೇಳಿದ್ದಾರೆ, ಅದರ ಬಗ್ಗೆ ನಾನು ಪ್ರಸ್ತುತ ಹೆಚ್ಚಿನ ವಿವರಗಳನ್ನು ಹೊಂದಿಲ್ಲ ಎಂದು ಉತ್ತರಿಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಮುಂದಿನ ವಿಚಾರಣೆಯ ದಿನಾಂಕದ ಬಗ್ಗೆ ಇಡಿ ಅಧಿಕಾರಿಗಳು ತಿಳಿಸಲಿಲ್ಲ ಎಂದು ಅವರು ಹೇಳಿದರು. ಇದೇ ವೇಳೆ ಶಿವಕುಮಾರ್ ಆದಾಯ ಮೀರಿದ ಆಸ್ತಿಯನ್ನು ತನಿಖೆ ಮಾಡುವ ಇಡಿ ಅಧಿಕಾರವನ್ನು ಪ್ರಶ್ನಿಸಿದ್ದಾರೆ.  “ನನ್ನ ವಿರುದ್ಧದ ಡಿಎ ಪ್ರಕರಣವನ್ನು ಸಿಬಿಐ ಈಗಾಗಲೇ ತನಿಖೆ ನಡೆಸುತ್ತಿರುವಾಗ, ಇಡಿ ಪ್ರಕರಣವನ್ನು ಮತ್ತೆ ಹೇಗೆ ತನಿಖೆ ಮಾಡಬಹುದು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ನನ್ನ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿದೆ. ಅವರು ನನ್ನ ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಲು ಬಯಸುತ್ತಾರೆ? ‘ಭಾರತ್ ಜೋಡೋ ಯಾತ್ರೆ’ಯ ನಡೆಯುತ್ತಿರುವ ವೇಳೆಯಲ್ಲಿಯೇ ನನ್ನನ್ನು ಹಳೆಯ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಕರೆಸುವುದು ಸಂಚು ಎಂದು ಆರೋಪಿಸಿದ ಅವರು, “ಅಂತಿಮವಾಗಿ, ಯಾರು ಸರಿ ಅಥವಾ ಯಾರು ತಪ್ಪು ಎಂಬುದನ್ನು ಕರ್ನಾಟಕದ ಜನರು ನಿರ್ಧರಿಸುತ್ತಾರೆ” ಎಂದು ಹೇಳಿದರು.
2020 ರಲ್ಲಿ, ಕೇಂದ್ರೀಯ ತನಿಖಾ ದಳವು ವೊಕ್ಕಲಿಗ ನಾಯಕನ ವಿರುದ್ಧ 74.93 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಪ್ರಕರಣವನ್ನು ದಾಖಲಿಸಿದೆ. 14 ಸ್ಥಳಗಳ ಮೇಲೆ ದಾಳಿ ನಡೆಸಿರುವ ಸಂಸ್ಥೆ 57 ಲಕ್ಷ ನಗದು ವಶಪಡಿಸಿಕೊಂಡಿರುವುದಾಗಿ ಹೇಳಿದೆ. ಸಿಬಿಐ ಪ್ರಕಾರ, ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಅಕ್ರಮ ಆಸ್ತಿಗಳ ಬಗ್ಗೆ ಏಳು ತಿಂಗಳ ಸುದೀರ್ಘ ಪ್ರಾಥಮಿಕ ತನಿಖೆಯ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. ಅವರು ಕರ್ನಾಟಕ ಸರ್ಕಾರದಲ್ಲಿ ಏಪ್ರಿಲ್ 1, 2013 ರಿಂದ ಏಪ್ರಿಲ್ 30, 2018 ನಡುವೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಅವರ ಕುಟುಂಬದ ಆಸ್ತಿಗಳು 2013ರ ಮುಂಚಿಗೆ ಹೋಲಿಸಿದರೆ ಬಹುಪಟ್ಟು ಹೆಚ್ಚಾಗಿದೆ ಎಂಬುದು ಸಿಬಿಐ ಆರೋಪ.
ಶಿವಕುಮಾರ್ ಅವರು 2018 ರಿಂದ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರನ್ನು 2019 ರಲ್ಲಿ ಬಂಧಿಸಲಾಗಿತ್ತು. ಈ ವರ್ಷ ಜುಲೈನಲ್ಲಿ ಇಡಿ ಕಾಂಗ್ರೆಸ್ ನಾಯಕನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!