ಬದನೆ ಕಾಯಿ ಚಟ್ನಿ ಎಲ್ಲರಿಗೂ ಬಹಳ ಪ್ರೀತಿ. ಆದರೆ ಒಂದೆ ರೀತಿ ಚಟ್ನಿ ತಿಂದು ತಿಂದು ಬೋರ್ ಆಗಿರುತ್ತದೆ. ಬದನೆ ಕಾಯಿ ಹೊಸ ರೀತಿಯಲ್ಲಿ ಚಟ್ನಿ ಮಾಡಬಹುದು. ಅದು ಹೇಗೆ ಗೊತ್ತಾ?
ಬೇಕಾಗುವ ಸಾಮಗ್ರಿ:
ಬದನೆ ಕಾಯಿ
ಈರುಳ್ಳಿ
ಹಸಿ ಮೆಣಸು
ಕರಿಬೇವು
ಲಿಂಬು
ಸಾಸಿವೆ
ಉದ್ದಿನ ಬೇಳೆ
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಬದನೆ ಕಾಯಿಯನ್ನು ಚೆನ್ನಾಗಿ ಸುಟ್ಟಿಕೊಳ್ಳಿ, (ಗ್ಯಾಸ್ ಒಲೆ ಅಥವಾ ಕೆಂಡದಲ್ಲಿ)
ನಂತರ ಸಿಪ್ಪೆ ತೆಗೆದುಕೊಂಡು ಸ್ಮಾಷ್ ಮಾಡಿಕೊಳ್ಳಿ.
ಅದಕ್ಕೆ ಉಪ್ಪು, ಲಿಂಬು ರಸ ಹಾಕಿ ಮಿಕ್ಸ್ ಮಾಡಿ.
ನಂತರ ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಹಸಿಮೆಣಸು ಹಾಕಿ ಒಗ್ಗರಣೆ ಮಾಡಿದರೆ ಬದನೆಕಾಯಿ ಚಟ್ನಿ ರೆಡಿ.