ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲಿರುವ ಈಜಿಪ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಈಜಿಪ್ಟ್‌ ದೇಶವು ಭಾರತವನ್ನು ತನ್ನ ಹೊಸ ಗೋಧಿ ಆಮದು ಮೂಲವನ್ನಾಗಿಸಿಕೊಂಡಿದೆ ಎಂದು ಈಜಿಪ್ಟ್‌ ಮೂಲದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದಿಂದಾಗಿ ಖರೀದಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ಭಾರತದಿಂದ ಗೋಧಿಯನ್ನು ಅಮದು ಮಾಡಿಕೊಳ್ಳುವುದರ ಜೊತೆಗೆ ಭಾರತವನ್ನು ತನ್ನ ಇತರೆ 16 ರಾಷ್ಟ್ರೀಯ ಆಮದು ಮೂಲಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಈಜಿಪ್ಟ್‌ನ ಸರಬರಾಜು ಸಚಿವಾಲಯ ಹೇಳಿದೆ.

ವಿಶ್ವದ ಅಗ್ರ ಗೋಧಿ ಆಮದುದಾರರ ಪಟ್ಟಿಗೆ ಸೇರುವ ಈಜಿಪ್ಟ್ ತನ್ನ ಸರಬರಾಜು ಸರಕುಗಳ ಸಾಮಾನ್ಯ ಪ್ರಾಧಿಕಾರ (GASC) ಮೂಲಕ ನಿಗದಿಪಡಿಸಿದ ಟೆಂಡರ್‌ ಗಳ ಮೂಲಕ ಧಾನ್ಯವನ್ನು ಖರೀದಿಸುತ್ತದೆ. ಪ್ರಸ್ತುತ GASC ಪಟ್ಟಿಯಲ್ಲಿ ರಷ್ಯಾ, ಉಕ್ರೇನ್, ಫ್ರಾನ್ಸ್, ಜರ್ಮನಿ, ಕಝಾಕಿಸ್ತಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 16 ಮಾನ್ಯತೆ ಪಡೆದ ಗೋಧಿ ಆಮದು ಮೂಲಗಳನ್ನು ಹೊಂದಿದ್ದು ಭಾರತವು ಇದೀಗ ಹೊಸತಾಗಿ ಸೇರ್ಪಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!