ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ತಡರಾತ್ರಿ ಈಜಿಪ್ಟ್‌ನ ಉತ್ತರ ಕೈರೋದಲ್ಲಿ ರೈಲು ಹಳಿತಪ್ಪಿ ಇಬ್ಬರು ಸಾವನ್ನಪ್ಪಿದ್ದು, 16 ಜನರು ಗಾಯಗೊಂಡಿರುವುದಾಗಿ ಈಜಿಪ್ಟ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಈಜಿಪ್ಟ್‌ನ ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ, ಕಲಿಯುಬ್‌ನ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ರೈಲು ಅಪ್ಪಳಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸುಮಾರು 20 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ದೌಡಾಯಿಸಿದವು.
ಈಜಿಪ್ಟ್ ಸಾರಿಗೆ ಸಚಿವ ಕಮೆಲ್ ಎಲ್-ವಾಜಿರ್ ಘಟನೆಗೆ ಕಾರಣವನ್ನು ಕಂಡುಹಿಡಿದು ಇದರ ಹೊಣೆ ಯಾರದ್ದು ಹಾಗೆಯೇ ಮತ್ತಷ್ಟು ಹಾನಿ ತಪ್ಪಿಸಲು ಸೂಕ್ತ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
2021 ರಲ್ಲಿ ಈಜಿಪ್ಟ್‌ನಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು 32 ಜನರು ಸಾವನ್ನಪ್ಪಿದರು ಮತ್ತು 84 ಜನರು ಗಾಯಗೊಂಡಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ತುರ್ತು ಬ್ರೇಕ್ ಎಳೆದ ನಂತರ ಘರ್ಷಣೆ ಸಂಭವಿಸಿದೆ ಎಂದು ಈಜಿಪ್ಟ್‌ನ ರೈಲ್ವೆ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಸ್ವಾನ್‌ನಿಂದ ಕೈರೋಗೆ ಹೋಗುತ್ತಿದ್ದ ರೈಲು ಲಕ್ಸರ್‌ನಿಂದ ಅಲೆಕ್ಸಾಂಡ್ರಿಯಾಕ್ಕೆ ತೆರಳುತ್ತಿದ್ದ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.