ಈದ್‌ ಮಿಲಾದ್‌: ಬೆಂಗಳೂರಿನ ಈ ಮುಖ್ಯ ರಸ್ತೆಯಲ್ಲಿ ಓಡಾಟ ಮಾಡುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈದ್​ ಮಿಲಾದ್​​ ಹುಬ್ಬದ ಪ್ರಯುಕ್ತ ನೃಪತುಂಗ ರಸ್ತೆಯಲ್ಲಿನ ವಾಯ್​. ಎಮ್​.ಸಿ.ಎ. ಮೈದಾನಕ್ಕೆ ಅಲಂಕೃತ ವಾಹನ ಹಾಗೂ ಮೆರವಣಿಗೆಗಳು ಬರಲಿವೆ.

ಹೀಗಾಗಿ ಜೆ.ಸಿ ರಸ್ತೆ, ಬಿವಿಕೆ ಆಯ್ಯಾಂಗರ್ ರಸ್ತೆ, ಅವಿನ್ಯೂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ ಹಾಗೂ ಮೈಸೂರು ಮುಖ್ಯರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ.

ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ ಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್.ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಲೂಲು ಮಾಲ್- ಓಕಳಿಪುರಂ ಜಂಕ್ಷನ್-ಖೋಡೆ ಜಂಕ್ಷನ್ ಮೂಲಕ ಮೆಜೆಸ್ಟಿಕ್​ಗೆ ಹೋಗಬಹುದು.

ಮೈಸೂರು ರಸ್ತೆ ಕಡೆಯಿಂದ ಮಾರ್ಕೆಟ್​ ಕಡೆಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್- ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್ ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್- ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಅಂಗಳಾ ಪರಮೇಶ್ವರಿ ದೇವಸ್ಥಾನ- ಬಿನ್ನಿಮಿಲ್ ಜಂಕ್ಷನ್- ಗೂಡ್ಸ್‌ ಶೆಡ್ ರಸ್ತೆ-ರಾಯನ್ ರಸ್ತೆ ಶಾಂತಲ ವೃತ್ತ-ಖೋಡೆ ಜಂಕ್ಷನ್- ಲಕ್ಷ್ಮಣಪುರಿ ಬ್ರಿಡ್ಜ್- ಫ್ರೀಡಂ ಪಾರ್ಕ್ ಜಂಕ್ಷನ್ ಮಹಾರಾಣಿ ಬ್ರಿಡ್ಜ್ ಮೂಲಕ ಹೋಗಬಹುದು.

ಸ್ಥಬ್ಧ ಚಿತ್ರಗಳು ಮಾರ್ಕೆಟ್ ಸರ್ಕಲ್​ಗೆ ಬಂದಾಗ ಎ.ಎಸ್ ಚಾರ್ ಸ್ಟ್ರೀಟ್ ಜಂಕ್ಷನ್​ನಲ್ಲಿ ವಾಹನಗಳು ಎಡ ತಿರುವು ಪಡೆದುಕೊಂಡು, (ಬಿವಿಕೆ ಅಯ್ಯಂಗಾರ್ ರಸ್ತೆ ಕಡೆಗೆ) ಹಾಗೂ ಜಿ.ಪಿ ಸ್ಪೀಟ್​ನಿಂದ ಎಸ್. ಆರ್ ರಸ್ತೆ ಮಾರ್ಗವಾಗಿ ಬರುವ ವಾಹಗಳು ಎಸ್.ಆರ್ ಸ್ಟ್ರೀಟ್ ರಸ್ತೆಗೆ ಬರದೆ, ಜಿಪಿ ಸ್ಟ್ರೀಟ್ ರಸ್ತೆಯಲ್ಲಿಯೇ ಮುಂದುವರೆದು ಬಿ.ವಿ.ಕೆ ಐಯ್ಯಾಂಗಾರ್ ರಸ್ತೆ ಮೂಲಕ ಮುಂದೆ ಹೋಗಲು ಅನುವು ಮಾಡಿಕೊಡಲಾಗಿದೆ.

ಕೆ.ಆರ್ ರಸ್ತೆ ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ಎಲ್ಲ ವಾಹನಗಳು ಫೋ. ಶಿವಶಂಕರಪ್ಪ ವೃತ್ತ- ಎಲ್.ಬಿ.ಎಫ್. ರಸ್ತೆ – ಪೆಸಿ.ರಸ್ತೆ – ಚೌನ ಹಾಲ್ ಕಡೆ ಹೋಗಬೇಕು. ಹಾಗೂ ಎ.ವಿ. ರಸ್ತೆ ಮೂಲಕ ಕೆ.ಆರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಹೋಗಬೇಕು.

ಸ್ಥಬ್ದ ಚಿತ್ರಗಳು ಎಸ್.ಜೆ.ಪಿ ರಸ್ತೆಯಲ್ಲಿ ಬಂದಾಗ ಮೈಸೂರು ರಸ್ತೆಯಿಂದ ಬರುವ ಸವಾರರು ಸಿಟಿ ಮಾರುಕಟ್ಟೆ ವೃತ್ತದಿಂದ ಕಲಾಸಿಪಾಳ್ಯ ಮುಖ್ಯರಸ್ತೆಯ ಕಡೆಗೆ ಬಲ ತಿರುವು ಪಡೆದುಕೊಂಡು ಕೆ.ಪಿ. ವಾಯಿಂಟ್- ಬಸಪ್ಪ ವೃತ್ತದಲ್ಲಿ ಎಡ ತಿರುವು ಪಡೆದುಕೊಂಡು ಎಲ್.ಬಿ.ಎಫ್ ರಸ್ತೆ ಮೂಲಕ ಜೆ.ಸಿ ರಸ್ತೆ ಟೌನ್‌ ಹಾಲ್‌ ಮುಖಾಂತರ ಮುಂದೆ ಹೋಗಬೇಕು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!