ಏರ್ ಇಂಡಿಯಾ ವಿಮಾನಗಳು ರದ್ದು: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ. ಈ ವಿಮಾನ ನಿಲ್ದಾಣದಿಂದ ಹೊರಹೋಗುವ-ಒಳಬರುವ ಎಂಟು ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಿದೆ. ಮಾಹಿತಿ ಇಲ್ಲದೇ ವಿಮಾನಗಳು ರದ್ದಾದ ಕಾರಣ ಹೈದರಾಬಾದ್‌ನಿಂದ ಹಲವೆಡೆ ತೆರಳುವ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.

ಸೋಮವಾರ ವಿಮಾನ ರದ್ದತಿಯಿಂದಾಗಿ ಪ್ರಯಾಣಿಕರು ಕೋಪಗೊಂಡಿದ್ದಾರೆ. ಏರ್ ಇಂಡಿಯಾ ವಿಮಾನ ಹತ್ತಬೇಕಿದ್ದ ಪ್ರಯಾಣಿಕರು ಮುಂಜಾನೆಯೇ ವಿಮಾನ ನಿಲ್ದಾಣ ತಲುಪಿದ್ದು, ಏರ್ ಇಂಡಿಯಾ ಈಗಾಗಲೇ 8 ವಿಮಾನಗಳನ್ನು ರದ್ದುಗೊಳಿಸಿರುವುದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೈದರಾಬಾದ್ – ತಿರುಪತಿ, ಹೈದರಾಬಾದ್ – ಬೆಂಗಳೂರು, ಹೈದರಾಬಾದ್ – ವೈಜಾಗ್, ಹೈದರಾಬಾದ್ – ಮೈಸೂರು, ಹೈದರಾಬಾದ್ – ಚೆನ್ನೈ, ತಿರುಪತಿ – ಹೈದರಾಬಾದ್, ಬೆಂಗಳೂರು – ಹೈದರಾಬಾದ್, ಚೆನ್ನೈ – ಹೈದರಾಬಾದ್ನ ವಿಮಾನಗಳು ರದ್ದಾಗಿವೆ.

ಸೋಮವಾರ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಎಂಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯ ಸಮಸ್ಯೆಯಿಂದಾಗಿ ಎಂಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ಘೋಷಿಸಿದ್ದಾರೆ. ವಿಮಾನಗಳು ರದ್ದತಿಯಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಪೂರ್ವ ಮಾಹಿತಿ ಇಲ್ಲದೆ ವಿಮಾನಗಳನ್ನು ರದ್ದುಗೊಳಿಸಿದ್ದಕ್ಕಾಗಿ ಅವರು ಅಧಿಕಾರಿಗಳ ವಿರುದ್ಧ ತೀವ್ರ ಕೋಪಗೊಂಡಿದ್ದಾರೆ. ಪ್ರಯಾಣಿಕರ ಆತಂಕಕ್ಕೆ ಸ್ಪಂದಿಸಿದ ಅಧಿಕಾರಿಗಳು ಟಿಕೆಟ್ ಹಣ ವಾಪಸ್ ನೀಡಲು ನಿರ್ಧರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!