spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುಕ್ಕೆಯಲ್ಲಿ ಏಕಾದಶಿ ಸ್ವಚ್ಛ ಸೇವಾ ದಿವಸ್: ಶನಿವಾರ ಸ್ವಚ್ಛ ಮಂದಿರ ಸೇವಾ ಅಭಿಯಾನಕ್ಕೆ ಚಾಲನೆ

- Advertisement -Nitte

ಹೊಸ ದಿಗಂತ ವರದಿ,ಸುಬ್ರಹ್ಮಣ್ಯ:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಆಡಳಿತ ಮಂಡಳಿಯು ಸ್ವಚ್ಛ ಮಂದಿರ ಸೇವಾ ಅಭಿಯಾನವನ್ನು ಆರಂಭಿಸಿದೆ. ಪ್ರತಿ ಏಕಾದಶಿಯಂದು ಕ್ಷೇತ್ರಾದ್ಯಂತ ಏಕಕಾಲದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಸ್ವಚ್ಛ ಸೇವಾ ದಿವಸ್ ಎಂಬ ಸೇವೆ ನೆರವೇರಿಸಲಾಗುವುದು. ಅ.16ರಂದು ಈ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ಏಕಾದಶಿಯ ದಿನವಾದ ಶನಿವಾರ ಮಧ್ಯಾಹ್ನ 2 ಗಂಟೆಗೆ ಸ್ವಚ್ಛ ಮಂದಿರ ಸೇವಾ ಅಭಿಯಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ. ಸಚಿವ ಎಸ್.ಅಂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಮುಖ್ಯ ಅತಿಥಿಗಳಾಗಿದ್ದಾರೆ. ತಿಂಗಳಲ್ಲಿ ಬರುವ ಎರಡು ಏಕಾದಶಿ ದಿನ ಕ್ಷೇತ್ರಾದ್ಯಂತ ಮಧ್ಯಾಹ್ನ ೨ಗಂಟೆಯಿಂದ ೩.೩೦ರ ತನಕ ಸ್ವಚ್ಛತೆ ನಡೆಸಲಾಗುವುದು. ಶ್ರೀದೇವಳದ ವ್ಯವಸ್ಥಾಪನಾ ಸಮಿತಿ, ಮಾಸ್ಟರ್ ಪ್ಲಾನ್ ಸಮಿತಿ, ಕಾರ್ಯನಿರ್ವಹಣಾಧಿಕಾರಿ, ಮತ್ತು ಸಿಬ್ಬಂದಿ ವರ್ಗ, ದೇವಳದ ಆಡಳಿತದ ಎಸ್‌ಎಸ್‌ಪಿಯು ಕಾಲೇಜು, ಪ್ರೌಢಶಾಲಾ ವಿಭಾಗ, ಕೆ.ಎಸ್.ಎಸ್.ಕಾಲೇಜುಗಳ ಎನ್.ಎಸ್.ಎಸ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ವರ್ತಕರು ಸೇರಿದಂತೆ ಏಕಕಾಲದಲ್ಲಿ ಸುಮಾರು 1000 ಕ್ಕೂ ಅಧಿಕ ಮಂದಿ 25 ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ನೆರವೇರಿಸಲಿದ್ದಾರೆ ಎಂದು ಮೋಹನರಾಂ ಸುಳ್ಳಿ ಹೇಳಿದರು.
ಸ್ಥಳ ನಿಗದಿ:
ದೇವಳದ ಒಳಾಂಗಣ,ಹೊರಾಂಗಣ, ಭೋಜನ ಶಾಲೆ, ದರ್ಪಣ ತೀರ್ಥ ನದಿ, ಗೋಪುರ ವಠಾರ, ರಥಬೀದಿ, ಪಾರ್ಕಿಂಗ್ ಸ್ಥಳ, ಆಂಜನೇಯ ಗುಡಿ, ಬೈಪಾಸ್ ರಸ್ತೆ, ವಸತಿ ಗೃಹಗಳ ವಠಾರ, ಆದಿ ಸುಬ್ರಹ್ಮಣ್ಯ, ಕಾಶಿಕಟ್ಟೆ, ಬಸ್ ನಿಲ್ದಾಣ, ಸರ್ಪಸಂಸ್ಕಾರ ಬೋಜನ ಶಾಲೆ, ಕಾಶಿಕಟ್ಟೆ, ಬಿಲದ್ವಾರ, ವನದುರ್ಗಾ ದೇವಿ ದೇವಳದಿಂದ ವಲ್ಲೀಶ ಸಭಾ ಭವನದ ತನಕ, ವಲ್ಲೀಶದಿಂದ ಕುಮಾರಧಾರ ಸ್ನಾನ ಘಟ್ಟದ ತನಕ, ಅಗ್ರಹಾರ ರಸ್ತೆ ಈ ರೀತಿಯಾಗಿ ಸ್ಥಳ ನಿಗದಿ ಮಾಡಿ ಆಯಾ ಪ್ರದೇಶಗಳಿಗೆ ತಂಡಗಳನ್ನು ನಿಯೋಜನೆ ಮಾಡಿ ಈಗಾಗಲೇ ಜವಬ್ದಾರಿ ನೀಡಲಾಗಿದೆ. ಭಕ್ತರೂ ನೋಂದಣಿ ಮಾಡಿಕೊಂಡು ಭಾಗವಹಿಸಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss