ಹೊಸ ದಿಗಂತ ಆನ್ ಲೈನ್ ಡೆಸ್ಕ್:
‘ವಯಸ್ಸು ಕೇವಲ ಸಂಖ್ಯೆ ಅಷ್ಟೆ, ಪ್ರೀತಿ, ಮದುವೆಗೆ ವಯಸ್ಸು ಅಡ್ಡಿಯಿಲ್ಲ’ ಎಂಬ ಮಾತಿಗೆ ಸಾಕ್ಷಿ ಎಂಬಂತೆ ಇಲ್ಲೊಂದು ಅಪೂರ್ವ ಸಂಗಮ ನಡೆದಿದೆ.
ಹೌದು.. ಆನ್ ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾಗಿ, ಒಬ್ಬರನ್ನೊಬ್ಬರು ಪ್ರೀತಿಸಿ ಈಗ ಮದುವೆಯಾಗಿದ್ದಾರೆ ಈ 78 ವರ್ಷದ ಜಿಮ್ ಆಡಮ್ಸ್ ಮತ್ತು 79 ವರ್ಷದ ವಿಮಾ ಬ್ರೋಕರ್ ಆಡ್ರೆ.
ಇದೀಗ ಈ ಮಾಗಿದ ಜೋಡಿ ಹಕ್ಕಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಇವರ ಪ್ರೇಮ ಕತೆ ಹಾಗೂ ಮದುವೆ ಫೋಟೋ ಭಾರೀ ವೈರಲ್ ಆಗುತ್ತಿದೆ.
ನಿವೃತ್ತ ಪ್ರಾಧ್ಯಾಪಕ, ಚಿತ್ರಕಾರ ಜಿಮ್ ಆಡಮ್ಸ್ 2017ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ಕಳೆದ ಮೂರು ವರ್ಷದಿಂದ ಒಬ್ಬಂಟಿಯಾಗಿ ಬದುಕುತ್ತಿದ್ದರು. ಕೋವಿಡ್ ಸಮಯದಲ್ಲಿ ಟೈಮ್ ಪಾಸ್ ಗೆಂದು 50 ವರ್ಷ ಮೇಲ್ಪಟ್ಟವರಿಗಾಗಿ ಇದ್ದಂತಹ ಆನ್ ಲೈನ್ ಡೇಟಿಂಗ್ ಅಪ್ಲಿಕೇಶನ್ ಸೇರಿಕೊಂಡರು.
ಆಡಮ್ಸ್ ಗೆ ಅಲ್ಲಿ 79 ವರ್ಷದ ವಿಚ್ಛೇದಿತ ಮಹಿಳೆ ಬ್ರೋಕರ್ ಆಂಡ್ರೆ ಪರಿಚಯವಾಗುತ್ತದೆ. ಸ್ವಲ್ಪ ದಿನದಲ್ಲಿ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಅದು ಪ್ರೀತಿಯಾಗಿ ಕವಲೊಡೆದು ನಂತರ ಮದುವೆ ಎಂಬ ಗಟ್ಟಿ ಬಂಧದಲ್ಲಿ ಕುಣಿಕೆ ಬಿಗಿದುಕೊಳ್ಳುತ್ತದೆ.
” ಆಂಡ್ರೆ ನೋಡಿದ ತಕ್ಷಣ ನನಗೆ ಲವ್ ಆ್ಯಟ್ ಫಸ್ಟ್ ಸೈಟ್ ಆಯ್ತು” ಎನ್ನುತ್ತಾರೆ ಜಿಮ್ ಆಡಮ್ಸ್.
https://www.instagram.com/p/CUbA5e1Paj8/?utm_source=ig_web_copy_link