Sunday, April 11, 2021

Latest Posts

ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಬರ್ಬರ ಹತ್ಯೆ

ಹೊಸದಿಗಂತ ವರದಿ, ಕೊಡಗು:

ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.

ಮಡಿಕೇರಿ ನಗರ್ ಹೊರವಲಯದ ಕ್ಲಬ್ ಮಹಿಂದ್ರ ರೆಸಾರ್ಟ್ ಬಳಿಯ, ಕಳಕೇರಿ ನಿಡುಗಣೆ ಗ್ರಾಮದ ದಿವಂಗತ ಬೈಲಾಡಿ ಹೊನ್ನಪ್ಪ ಅವರ ಧರ್ಮಪತ್ನಿ ಲಲಿತಾ(70) ಎಂಬವರನ್ನು ನಿನ್ನೆ ಸಂಜೆ ಯಾರೋ ದುಷ್ಕರ್ಮಿಗಳು ಹತ್ಯೆಗೈದಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳೆಯ ಮಕ್ಕಳು ಉದ್ಯೋಗ ನಿಮಿತ್ತ ಬೇರೆಡೆ ನೆಲೆಸಿದ್ದು, ಈಕೆ ಒಬ್ಬಂಟಿಯಾಗಿ ಇಲ್ಲಿ ವಾಸಿಸುತ್ತಿದ್ದರು. ಸ್ನಾನದ ಕೋಣೆಯಲ್ಲಿ ಇವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದ್ದು, ಮನೆಯಲ್ಲಿದ್ದ ಕಪಾಟು, ಪೆಟ್ಟಗೆಗಳು ತೆರೆಯಲ್ಪಟ್ಟಿವೆ. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು,ಮನೆ ಕಳ್ಳತನಕ್ಕೆ ಬಂದವರೇ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.

ಇವರ ಮನೆಯ ಸಮೀಪ ನೂತನ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಹೊರರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ದೃಷ್ಟಿ ಅತ್ತ ಹೊರಳಿದ್ದು, ತನಿಖೆ ಮುಂದುವರಿದಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss