ಚುನಾವಣೆ ಅಲರ್ಟ್: ಯಾವುದೇ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 3 ಲಕ್ಷ ರೂ. ವಶ

ಹೊಸದಿಗಂತ ವರದಿ,ಮೈಸೂರು :

ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 3 ಲಕ್ಷರೂ ಹಣವನ್ನು ಚುನಾವಣೆಯ ತಪಾಸಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಮ್ಮನಹಳ್ಳಿ ಚೆಕ್ ಪೋಸ್ಟ್ನಲ್ಲಿ ಶನಿವಾರ ಮಧ್ಯಾಹ್ನ 3.15ರ ವೇಳೆಯಲ್ಲಿ ಬೈಕ್‌ವೊಂದರಲ್ಲಿ ದಾಖಲೆಯಿಲ್ಲದೆ 3 ಲಕ್ಷರೂ ಹಣ ಸಾಗಿಸುತ್ತಿರುವುದನ್ನು ತಪಾಸಣಾಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು, ಬೈಕ್ ಸವಾರರಿಗೆ ಹಣದ ಬಗ್ಗೆ ಸಮಜಾಯಿಸಿ ನೀಡಲು ನೋಟಿಸ್ ಜಾರಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!